ADVERTISEMENT

ಶ್ರೀರಾಂಪುರ ಹೋಬಳಿಯ ಕೆಲವೆಡೆ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:00 IST
Last Updated 23 ಏಪ್ರಿಲ್ 2021, 5:00 IST
ಶ್ರೀರಾಂಪುರ ಹೋಬಳಿಯ ಕೆರೆಹೊಸಹಳ್ಳಿ ಗ್ರಾಮದ ತೋಟವೊಂದರಲ್ಲಿ ನೀರು ನಿಂತಿರುವುದು
ಶ್ರೀರಾಂಪುರ ಹೋಬಳಿಯ ಕೆರೆಹೊಸಹಳ್ಳಿ ಗ್ರಾಮದ ತೋಟವೊಂದರಲ್ಲಿ ನೀರು ನಿಂತಿರುವುದು   

ಶ್ರೀರಾಂಪುರ: ಹೋಬಳಿಯ ಕೆಲವೆಡೆ ಗುರುವಾರ ಉತ್ತಮ ಮಳೆಯಾಯಿತು.

ಹೋಬಳಿಯ ಗರಗ, ಕೋಡಿಹಳ್ಳಿ, ಕೆರೆಹೊಸಹಳ್ಳಿ, ಬೆಲಗೂರು ಸುತ್ತಮುತ್ತ, ನಾಯಿಗೆರೆ, ನಗರಗೆರೆ, ಹಾರೋಗೊಂಡಹಳ್ಳಿ, ಎಸ್. ನೇರಲಕೆರೆ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಯಿತು.

ಸಂಜೆ ಬೀಸಿದ ಗಾಳಿಗೆ ಹಾರೋಗೊಂಡನಳ್ಳಿ ಗ್ರಾಮದಲ್ಲಿ ಮೂರು ತೆಂಗಿನ ಮರಗಳಿಗೆ ಹಾನಿಯಾಗಿದೆ. ಬಸವರಾಜ್ ಎಂಬುವವರಿಗೆ ಸೇರಿದ 6 ಅಡಿಕೆ ಮರಕ್ಕೆ ಹಾನಿಯಾಗಿದೆ.

ADVERTISEMENT

ಎಪಿಎಂಸಿ ಮುಂಭಾಗದ ಮರಕ್ಕೆ ಸಿಡಿಲು ಬಡಿದು ಮರದ ಟೊಂಗೆ ಮುರಿದು ಬಿದ್ದಿದೆ. ಸಮೀಪವೇ ನಿಂತಿದ್ದ ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೋಬಳಿಯ ಕುರುಬರಹಳ್ಳಿ ಗ್ರಾಮದ ರಂಗಪ್ಪ ಅವರ ಮನೆಯ ಶೀಟ್‌ಗಳು ಹಾರಿ ಹೋಗಿದ್ದು, ಮನೆಯಲ್ಲಿ ಸಂಗ್ರಹಿಸಿದ್ದ ರಾಗಿ ಬೆಳೆಗೆ ಹಾನಿಯಾಗಿದೆ. ತಂಡಗ ಗ್ರಾಮದ ಪರಪ್ಪ ಅವರ ತೋಟದ ಮನೆಯ ಗೋಡೆ ಬಿದ್ದು ಪರಣ್ಣ ಎಂಬುವವರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.