ಚಳ್ಳಕೆರೆ: ಅವ್ಯವಹಾರದಲ್ಲಿ ಭಾಗಿಯಾಗಿರುವ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ನಿರ್ದೇಶಕ ಯುವರಾಜ ಅಮಾನತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಯುವ ಸೇನೆ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದ ಪ್ರಮುಖ ಬೀದಿಯಲ್ಲಿ ತಮಟೆ ವಾದ್ಯದೊಂದಿಗೆ ಮಂಗಳವಾರ ಮೆರವಣಿಗೆ ನಡೆಸಿದರು.
ಯುವರಾಜ ಅವರು ವೈದ್ಯರ ನೇಮಕಾತಿಗೆ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದಿದ್ದಾರೆ. ಹೀಗಾಗಿ ಈ ಅವ್ಯವಹಾರ ಪ್ರಕರಣವನ್ನು ಲೋಕಾಯುಕ್ತ, ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಮಾಂಜನೇಯ ಒತ್ತಾಯಿಸಿದರು.
ಪ್ರಕರಣದ ತನಿಖೆಯಾಗುವವರೆಗೆ ನಿರ್ದೇಶಕರನ್ನು ಅಮಾನತಿನಲ್ಲಿಡಬೇಕು. ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಅರ್ಹರಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಯುವಸೇನೆ ಮುಖಂಡ ಡಿ.ಬಸವರಾಜ ಮನವಿ ಮಾಡಿದರು.
ತಹಶೀಲ್ದಾರ್ ರೇಹಾನ್‍ಪಾಷ ಮನವಿ ಸ್ವೀಕರಿಸಿದರು. ಕಾರ್ಯಕರ್ತರಾದ ತಿಪ್ಪೇಸ್ವಾಮಿ, ತಾರಕೇಶ, ಪೆನ್ನಯ್ಯ, ಮೂಡಲಗಿರಿಯಪ್ಪ, ರಾಜ, ಮಂಜುನಾಥ, ವೆಂಕಟ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.