ADVERTISEMENT

ಚಿತ್ರದುರ್ಗ: ಶ್ರದ್ಧಾ ಭಕ್ತಿಯ ಮಹೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:28 IST
Last Updated 17 ಡಿಸೆಂಬರ್ 2025, 6:28 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿಕ್ಕಜಾಜೂರು: ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದಲ್ಲಿ ಮಂಗಳವಾರ ಮಹೇಶ್ವರ ಜಾತ್ರೆಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. 

ಗ್ರಾಮ ದೇವರು ಕಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಗ್ರಾಮ ಸಮೀಪದ ಬಿಲ್ವಪತ್ರೆ ವನದಲ್ಲಿನ ಮಹೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಕೂರಿಸಲಾಯಿತು. 

ADVERTISEMENT

ದೇವಸ್ಥಾನದ ಬಳಿ ಗ್ರಾಮದಿಂದ ತಂದಿದ್ದ ಹೊಸ ಪಾತ್ರೆಯಲ್ಲಿ ಅಕ್ಕಿ ಮತ್ತು ಬೆಲ್ಲವನ್ನು ಹಾಕಿ ಅನ್ನವನ್ನು ಬೇಯಿಸಿದರು. ಅರ್ಚಕರು ಅನ್ನವನ್ನು ದೇವರುಗಳ ಮುಂದೆ ಎಡೆ ಹಾಕಿ ಮಹಾ ಮಂಗಳಾರತಿ ಮಾಡಿದರು. 

ಪೂಜೆಯ ನಂತರ, ಹಾಲು, ಬೆಲ್ಲ ಹಾಗೂ ಬಾಳೆ ಹಣ್ಣುಗಳನ್ನು ಕಲಿಸಿದ ಅನ್ನವನ್ನು ಭಕ್ತರಿಗೆ ಪ್ರಸಾದವಾಗಿ ಹಂಚಲಾಯಿತು. ಸಂಜೆ, ಕಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ಕರೆತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.