ADVERTISEMENT

ಚಿತ್ರದುರ್ಗ: ಬಜೆಟ್‌ ಟೀಕೆಗೆ ಕೃಷಿ ಸಚಿವ ಕಿಡಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 4:39 IST
Last Updated 7 ಮಾರ್ಚ್ 2022, 4:39 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಚಿತ್ರದುರ್ಗ: ಕೋವಿಡ್‌ ಸಂಕಷ್ಟ, ಆರ್ಥಿಕತೆಗೆ ಹೊಡೆತ ಬಿದ್ದ ಸಂದರ್ಭದಲ್ಲಿಯೂ ರಾಜ್ಯ ಸರ್ಕಾರ ಜನಸ್ನೇಹಿ ಬಜೆಟ್‌ ಮಂಡಿಸಿದೆ. ಟೀಕಿಸುವುದನ್ನೇ ಕಾಯಕ ಮಾಡಿಕೊಂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಬಜೆಟ್‌ ರುಚಿಯೇ ತಿಳಿಯದ ಎಚ್‌.ಡಿ. ಕುಮಾರಸ್ವಾಮಿ ವಿನಾ ಕಾರಣ ವಿರೋಧಿಸುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಕಿಡಿಕಾರಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತರು, ಮಕ್ಕಳು, ಕಾರ್ಮಿಕರು, ಮಹಿಳೆಯರು ಸೇರಿ ಎಲ್ಲ ಕ್ಷೇತ್ರದ ಜನರನ್ನು ತಲುಪಿದ ಜನಸ್ನೇಹಿ ಬಜೆಟ್‌ ಇದಾಗಿದೆ. ಇಂತಹ ರಚನಾತ್ಮಕ ಬಜೆಟ್‌ ಈವರೆಗೆ ಮಂಡನೆಯಾಗಿರಲಿಲ್ಲ ಎಂಬ ಪ್ರಶಂಸೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಹೀಗಾಗಿ, ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದರು.

‘ಮೇಕೆದಾಟು ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯೋಜನೆ ಅನುಷ್ಠಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದರಿಂದ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಜನಪರವಾದ ಸರ್ಕಾರವೊಂದು ಸ್ವಯಂಪ್ರೇರಿತವಾಗಿ ಈ ಕಾರ್ಯ ಮಾಡಿದೆಯೇ ಹೊರತು ಕಾಂಗ್ರೆಸ್‌ ಹೋರಾಟದಿಂದ ಅಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.