ADVERTISEMENT

ಇಸ್ಲಾಂ, ಕ್ರಿಶ್ಚಿಯನ್‌ ಧರ್ಮದಿಂದ ಅಪಾಯ: ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 22 ಮೇ 2022, 20:07 IST
Last Updated 22 ಮೇ 2022, 20:07 IST
ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ   

ಚಿತ್ರದುರ್ಗ: ‘ಧಾರ್ಮಿಕ ವೈವಿಧ್ಯವನ್ನು ಒಪ್ಪದ ಸ್ವಾರ್ಥಪ್ರೇರಿತ ಚಿಂತನೆಯ ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಧರ್ಮದಿಂದ ದೇಶಕ್ಕೆ ಅಪಾಯ ಎದುರಾಗಿದೆ. ವಾರಾಣಸಿಯ ವಿಶ್ವನಾಥ ದೇಗುಲದ ಶಿವಲಿಂಗದ ಸ್ಥಿತಿಗೆ ಮರುಗುವಂತಾಗಿದೆ’ ಎಂದು ಹರಿಹರಪುರದ ಶಾರದಾ ಲಕ್ಷ್ಮೀನರಸಿಂಹಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲ್ಲೂಕಿನ ಗೋನೂರು ಗ್ರಾಮದ ರಾಜರಾಜೇಶ್ವರಿ ದೇಗುದಲ್ಲಿ ಭಾನುವಾರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಅತ್ಯಂತ ಪ್ರಾಚೀನವಾದುದು ಭಾರತೀಯ ಸಂಸ್ಕೃತಿ. ಧಾರ್ಮಿಕ ವೈವಿಧ್ಯದ ಸಂಸ್ಕೃತಿಯನ್ನು ಒಪ್ಪಿಕೊಳ್ಳದಿರುವುದು ವಿದೇಶಿ ಸಂಸ್ಕೃತಿ. ದೇವರೊಬ್ಬನೇ ಎಂದು ಪ್ರತಿಪಾದಿಸುವ ಸಂಕುಚಿತ ಮನೋಭಾವದವರಿಂದ ಮತಾಂತರ, ಹಿಂಸೆ, ರಕ್ತಪಾತದಂತಹ ದಾಳಿಗೆ ಭಾರತ ಗುರಿಯಾಗುತ್ತಿದೆ. ಭಾರತೀಯ ಸಂಸ್ಕೃತಿಯ ಮೇಲೆ ಬಾಹ್ಯ ಮತ್ತು ಆಂತರಿಕ ದಾಳಿಗಳು ನಡೆಯುತ್ತಿವೆ’ ಎಂದರು.

‘ಶ್ರೀರಾಮ, ಬುದ್ಧ ಹಾಗೂ ಜೈನ ಧರ್ಮದ ತೀರ್ಥಂಕರರು ಮೂಲತಃ ಸೂರ್ಯ ವಂಶದವರು. ಒಬ್ಬೊಬ್ಬರು ಒಂದೊಂದು ಮಾರ್ಗದಲ್ಲಿ ದೇವರನ್ನು ಕಂಡುಕೊಂಡಿದ್ದಾರೆ. ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಧರ್ಮಗಳು ಮಾತ್ರ ಭಾರತವನ್ನು ಸರ್ವನಾಶ ಮಾಡಲು ಹವಣಿಸಿವೆ. ಶತಮಾನಗಳಿಂದ ದೇಶದ ಮೇಲೆ ದಾಳಿ ನಡೆಸಿ ಭಯೋತ್ಪಾದನೆ ನಡೆಸಿವೆ. ಈ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದುಹೇಳಿದರು.

ADVERTISEMENT

***

ವಾರಾಣಸಿಯ ಶಿವಲಿಂಗದ ಬಗೆಗೆ ಆಕ್ಷೇಪಾರ್ಹವಾಗಿ ಮಾತನಾಡುವುದು ತಪ್ಪು. ಹಿಂದೂ ದೇಗುಲಗಳ ರಕ್ಷಣೆಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಶಿವಲಿಂಗ ಕಾಯಲಿದ್ದಾರೆ.
-ಶಿವಲಿಂಗಾನಂದ ಸ್ವಾಮೀಜಿ, ಕಬೀರಾನಂದ ಆಶ್ರಮ, ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.