ADVERTISEMENT

ಮರ ಆಧಾರಿತ ನೈಸರ್ಗಿಕ ಕೃಷಿಗೆ ಆದ್ಯತೆ ನೀಡಿ: ಆರ್. ರಜನೀಕಾಂತ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:27 IST
Last Updated 10 ಜೂನ್ 2025, 15:27 IST
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಆರ್. ರಜನೀಕಾಂತ ಉದ್ಘಾಟಿಸಿದರು
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಆರ್. ರಜನೀಕಾಂತ ಉದ್ಘಾಟಿಸಿದರು   

ಹಿರಿಯೂರು: ಜೇನು ಕೃಷಿ, ಗೋವು ಆಧಾರಿತ ಮತ್ತು ಮರ ಆಧಾರಿತ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ, ಉತ್ತಮ ಪರಿಸರ ಮತ್ತು ಸುಸ್ಥಿರ ಆದಾಯ ಪಡೆಯಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್. ರಜನೀಕಾಂತ ಹೇಳಿದರು.

ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮರ ಆಧಾರಿತ ನೈಸರ್ಗಿಕ ಕೃಷಿ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚು ಇಳುವರಿ ಪಡೆಯುವ ಉಮೇದಿನಲ್ಲಿ ಹೆಚ್ಚು ರಸಗೊಬ್ಬರ, ಕೀಟನಾಶಕ ಬಳಸಿದರೆ ಉತ್ಪಾದನಾ ವೆಚ್ಚ ಅಧಿಕವಾಗುತ್ತದೆ ಎಂದರು. 

ಮರ ಆಧಾರಿತ ನೈಸರ್ಗಿಕ ಕೃಷಿಯಿಂದ ಉತ್ತಮ ಮಳೆ, ಮಣ್ಣಿನ ಆರೋಗ್ಯದಲ್ಲಿ ಸುಧಾರಣೆ, ಮಣ್ಣಿನ ಸವಕಳಿ ನಿಯಂತ್ರಣ, ಮಿತ್ರ ಹಾಗೂ ಶತ್ರು ಕೀಟಗಳ ಸಮತೋಲನ, ತಂಪಾದ ವಾತಾವರಣ, ನೀರು ಆವಿಯಾಗುವಿಕೆ ಪ್ರಮಾಣದಲ್ಲಿ ಇಳಿಕೆ, ಹೆಚ್ಚಿನ ನೀರಿನ ಇಂಗುವಿಕೆ, ಇಂಗಾಲದ ಪ್ರಮಾಣದಲ್ಲಿ ಗಣನೀಯ ಇಳಿಮುಖ ಕಂಡುಬರುತ್ತದೆ. ಏಕ ಬೆಳೆ ಪದ್ಧತಿಯ ಬದಲು ಬಹುಬೆಳೆ ಪದ್ಧತಿ ಅಳವಡಿಸಿಕೊಂಡಲ್ಲಿ ಸುಸ್ಥಿರ ಆದಾಯದ ಜೊತೆ ಮಣ್ಣಿನ ಆರೋಗ್ಯ ಕಾಪಾಡಬಹುದು ಎಂದು ಎಂದು ರಾಜ್ಯ ವೈಜ್ಞಾನಿಕ ಸಲಹಾ ಸಮಿತಿಯ ಮಂಡಳಿ ಸದಸ್ಯ ಚಂದ್ರಶೇಖರ್ ಎಂ. ಬಿರಾದಾರ್ ತಿಳಿಸಿದರು.

ADVERTISEMENT

ರೈತ ಹೋರಾಟಗಾರ ಈಚಘಟ್ಟದ ಸಿದ್ದವೀರಪ್ಪ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್, ಜಿಲ್ಲಾ ಜಾಗೃತಿ ಮತ್ತು ಪರಿಸರ ಸಂರಕ್ಷಣಾ ಉಪಾಧ್ಯಕ್ಷ ಓಂಕಾರಪ್ಪ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.