ADVERTISEMENT

‘ಸಾರ್ವಜನಿಕರು ಹೆಲ್ಮೆಟ್ ಮಹತ್ವ ತಿಳಿಯಬೇಕು’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:29 IST
Last Updated 26 ನವೆಂಬರ್ 2025, 5:29 IST
ನಾಯಕನಹಟ್ಟಿ ಪಟ್ಟಣದ ಪೊಲೀಸ್‌ಠಾಣೆ ಆವರಣದಲ್ಲಿ ಮಂಗಳವಾರ ಪಿಎಸ್‌ಐ ಜಿ. ಪಾಂಡುರಂಗ ಅವರು ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಹೆಲ್ಮೆಟ್ ವಿತರಿಸಿದರು
ನಾಯಕನಹಟ್ಟಿ ಪಟ್ಟಣದ ಪೊಲೀಸ್‌ಠಾಣೆ ಆವರಣದಲ್ಲಿ ಮಂಗಳವಾರ ಪಿಎಸ್‌ಐ ಜಿ. ಪಾಂಡುರಂಗ ಅವರು ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಹೆಲ್ಮೆಟ್ ವಿತರಿಸಿದರು   

ನಾಯಕನಹಟ್ಟಿ: ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸುವುದನ್ನು ನಿರ್ಲಕ್ಷಿಸದರೆ ಅಪಘಾತ ಸಂಬವಿಸಿದಾಗ ಜೀವಕ್ಕೆ ಕುತ್ತು ಬುರುವುದು ಖಚಿತ. ಹಾಗಾಗಿ ಸಾರ್ವಜನಿಕರು ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪಿಎಸ್‌ಐ ಜಿ. ಪಾಂಡುರಂಗ ಹೇಳಿದರು.

ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ಮಂಗಳವಾರ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಂಚಾರಿ ನಿಯಮಗಳ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್ ನೀಡಿ ಮಾತನಾಡಿದರು.

ದೇಶದಾಧ್ಯಂತ ಒಂದು ವರ್ಷದಲ್ಲಿ ಸರಾಸರಿ 4.80 ಲಕ್ಷ ಬೈಕ್ ಅಪಾಘಾತಗಳು ಜರುಗುತ್ತಿವೆ. 1.80 ಲಕ್ಷ ಜನ ಬೈಕ್ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂಬ ಅಂಕಿಅಂಶವನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದೆ. ಹಾಗಾಗಿ ಸಾರ್ವಜನಿಕರು ಬೈಕ್ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕು. ಇಲ್ಲವಾದರೆ ಭಾರಿ ಪ್ರಮಾಣದ ದಂಡವನ್ನು ತೆರಬೇಕಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ. ಹಾಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

ADVERTISEMENT

ಇದೇವೇಳೆ ಒಂದು ವಾರದಿಂದ ಪಟ್ಟಣ, ಹೋಬಳಿಯಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹ, ಸಂಚಾರ ನಿಯಮಗಳ ಬಗ್ಗೆ ಸರಣಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸೋಮವಾರ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿ, ಇದರಲ್ಲಿ ವಿಜೇತವಾದ 25 ಜನಕ್ಕೆ ಹೆಲ್ಮೆಟ್‌ಗಳನ್ನು ಬಹುಮಾನವಾಗಿ ವಿತರಿಸಿದರು.

ಪೊಲೀಸ್ ಸಿಬ್ಬಂದಿ ಅಣ್ಣಪ್ಪನಾಯ್ಕ್, ಇ.ಎಂ.ಬಾಷಾ, ಹನುಮಂತು, ಶಿವಣ್ಣ, ಲಕ್ಷ್ಮಿ ದೇವಿ, ಚೈತ್ರ, ಸಾರ್ವಜನಿಕರಾದ ಚಂದು, ಅಭಿಷೇಕ್, ಟಿ.ಕುಶಾ, ನಾಗೇಶ್, ರಾಧಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.