ನಾಯಕನಹಟ್ಟಿ : 'ಸಾಮಾಜಿಕ ಭದ್ರತಾ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ' ಎಂದು ಜಿ.ಪಂ.ಯೋಜನಾ ನಿರ್ದೇಶಕಿ ಸಿ.ಎಸ್.ಗಾಯತ್ರಿ ತಿಳಿಸಿದರು.
ತುರುವನೂರು ಗ್ರಾಮದಲ್ಲಿ ಕೆನರಾಬ್ಯಾಂಕ್ ಶಾಖೆಯು ಹಮ್ಮಿಕೊಂಡಿದ್ದ ಸಾಮಾಜಿಕ ಭದ್ರತಾ ಯೋಜನೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಮಹಿಳೆಯರು ಆರ್ಥಿಕ ಸಬಲೀಕರಣದ ಜೊತೆಗೆ ಸಾಮಾಜಿಕ ಭದ್ರತೆಯ ಕಡೆಗೂ ಗಮನ ಹರಿಸಬೇಕು’ ಎಂದುರು.
‘ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆರ್ಥಿಕ ಸ್ವಾವಲಂಬನೆಯಲ್ಲಿ ದಿಟ್ಟ ಹೆಜ್ಜೆ ಇರಿಸಿದ್ದಾರೆ. ಜೊತೆಗೆ ಸಾರ್ವಜನಿಕರು ತಮ್ಮ ದುಡಿಮೆಯ ಅವಧಿಯಲ್ಲಿ ವೃದ್ಧಾಪ್ಯ ಮತ್ತು ಅಕಸ್ಮಿಕವಾಗಿ ಸಂಭವಿಸುವ ಅವಘಡಗಳಿಗೆ ಸಿದ್ಧತೆಯನ್ನು ಹೊಂದಿರಬೇಕು. ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಇಂಥಹ ಹಲವಾರು ಯೋಜನೆಗಳನ್ನ ರೂಪಿಸಿದೆ’ ಎಂದರು
‘ಪ್ರಧಾನಮಂತ್ರಿ ಜೀವನಜ್ಯೋತಿ ಯೋಜನೆಯಲ್ಲಿ ಕೇವಲ ₹.436 ನೀಡಿ ₹.2 ಲಕ್ಷ ಮೊತ್ತದ ಜೀವವಿಮೆ ಪಡೆಯಬಹುದು. ಸುರಕ್ಷಾ ವಿಮಾ ಯೋಜನೆಯಲ್ಲಿ ವರ್ಷಕ್ಕೆ ₹.20 ಪಾವತಿಸಿ ₹.2 ಲಕ್ಷ ವಿಮಾ ರಕ್ಷಣೆ ಪಡೆಯಬಹುದು. ಇಂಥಹ ಸಾಮಾಜಿಕ ಭದ್ರತಾ ಯೋಜನೆಗಳು ವ್ಯಕ್ತಿ ಅವಲಂಬಿತ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ಹಾಗೂ ಕುಟುಂಬದ ರಕ್ಷಣೆಗೆ ಸಹಕಾರಿಯಾಗುತ್ತವೆ’ ಎಂದರು.
‘ಅಂಗವಿಕಲರು, ವೃದ್ಧರು, ವಿಧವೆಯರಿಗೆ ಸಾಮಾಜಿಕ ಭದ್ರತ ಯೋಜನೆಗಳು ತಲುಪಬೇಕು. ಇದಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕು. ಜುಲೈ ತಿಂಗಳು ಈ ಅಭಿಯಾನವನ್ನು ಕೆನರಾಬ್ಯಾಂಕ್‌ನ ಎಲ್ಲಾ ಸರ್ಕಾರೇತರ ಸಂಸ್ಥೆಗಳ ಜೊತೆಗೆ ಆಯೋಜಿಸಿದೆ. ಸಮಾಜದಲ್ಲಿನ ಪ್ರತಿ ವ್ಯಕ್ತಿಯೂ ಸಾಮಾಜಿಕ ಭದ್ರತೆಯ ಯೋಜನೆಯನ್ನು ಹೊಂದಿರಬೇಕೆಂದು’ ಸಿ.ಎಸ್.ಗಾಯತ್ರಿ ಮಾಹಿತಿ ನೀಡಿದರು.
ಚಿತ್ರದುರ್ಗ ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ, ಗ್ರಾ.ಪಂ. ಪಿಡಿಒ ಖಲೀಮ್, ಕೂನಬೇವು ಪಿಡಿಒ ಧನಂಜಯ, ಗ್ರಾ.ಪಂ.ಅಧ್ಯಕ್ಷೆ ನಾಗರತ್ನ, ಆರ್ಥಿಕ ಸಾಕ್ಷರತೆ ಸಲಹೆಗಾರ ತಿಪ್ಪೇಸ್ವಾಮಿ, ತುರುವನೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕೆ.ಓ.ಕುಶಾಲ್‌ಕುಮಾರ್, ಸಂಪನ್ಮೂಲ ವ್ಯಕ್ತಿ ಉದಯ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.