ADVERTISEMENT

ಜಾತಿ ಗಣತಿಯಲ್ಲಿ ಮಾದಿಗ ಎಂದೇ ನಮೂದಿಸಿ

​ಪ್ರಜಾವಾಣಿ ವಾರ್ತೆ
Published 4 ಮೇ 2025, 16:07 IST
Last Updated 4 ಮೇ 2025, 16:07 IST
ಹೊಳಲ್ಕೆರೆಯಲ್ಲಿ ಮಾದಿಗ ಜನಾಂಗದ ಮುಖಂಡರು ಒಳಮೀಸಲಾತಿ ಜಾತಿಗಣತಿಯ ಕುರಿತು ಜಾಗೃತಿ ಮೂಡಿಸಿದರು
ಹೊಳಲ್ಕೆರೆಯಲ್ಲಿ ಮಾದಿಗ ಜನಾಂಗದ ಮುಖಂಡರು ಒಳಮೀಸಲಾತಿ ಜಾತಿಗಣತಿಯ ಕುರಿತು ಜಾಗೃತಿ ಮೂಡಿಸಿದರು   

ಹೊಳಲ್ಕೆರೆ: ಜಾತಿಗಣತಿದಾರರು ಮನೆಗೆ ಬಂದಾಗ ಮಾದಿಗ ಎಂದೇ ಬರೆಸಬೇಕು ಎಂದು ಮಾದಿಗ ಸಮುದಾಯದ ಮುಖಂಡ ಪಾಡಿಗಟ್ಟೆ ಸುರೇಶ್ ತಿಳಿಸಿದರು.

ಪಟ್ಟಣದಲ್ಲಿ ಜಾತಿ ಗಣತಿ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾದಿಗ ಸಮುದಾಯಗಳ ಗಟ್ಟಿ ಧ್ವನಿ ಹಾಗೂ ಮಾಜಿ ಸಚಿವ ಎಚ್.ಆಂಜನೇಯ ಅವರ ಕಾಳಜಿ ಹಾಗೂ ಸಮುದಾಯದ ಮುಖಂಡರ 30 ವರ್ಷಗಳ ಹೋರಾಟದ ಫಲವಾಗಿ ಒಳಮೀಸಲಾತಿ ಜಾರಿಯಾಗುತ್ತಿದೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 40,000 ಮಾದಿಗರಿದ್ದಾರೆ. ಗಣತಿದಾರರು ಮೇ 5ರಿಂದ 17ರವರೆಗೆ ಮನೆಗೆ ಬರಲಿದ್ದು, ಮಾದಿಗ ಸಮುದಾಯದವರು ಮನೆಯಲ್ಲಿಯೇ ಇದ್ದು, ಕೋಡ್ 61 ಮಾದಿಗ ಎಂದು ಬರೆಸಬೇಕು ಎಂದು ಸೂಚಿಸಿದರು.

ADVERTISEMENT

ಮಾದಿಗ ಸಮುದಾಯದ ಮುಖಂಡರಾದ ಪಾಂಡುರಂಗ ಸ್ವಾಮಿ, ಕೆಂಗುಂಟೆ ಜಯಣ್ಣ, ಚಿಕ್ಕಜಾಜೂರು ಸೋಮಣ್ಣ, ಕುಬೇರಪ್ಪ ಮದ್ದೇರು, ಕಿರಣ್ ಕುಮಾರ್, ರಾಜಪ್ಪ, ಸುಂದರ್, ನವೀನ್, ಮಂಜುನಾಥ್, ರುದ್ರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.