ADVERTISEMENT

ಒಂದು ಸ್ಥಾನಕ್ಕೆ ಸಲ್ಲಿಕೆಯಾಗದ ಉಮೇದುವಾರಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 3:50 IST
Last Updated 20 ಡಿಸೆಂಬರ್ 2020, 3:50 IST

ಮೊಳಕಾಲ್ಮುರು:ತಾಲ್ಲೂಕಿನ ಕೋನಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇತ್ರನಹಳ್ಳಿ ಗ್ರಾಮದ ಒಂದು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.

ಈ ಗ್ರಾಮದಿಂದ ನಾಲ್ಕು ಸದಸ್ಯ ಸ್ಥಾನಗಳನ್ನು ಆಯ್ಕೆ ಮಾಡಬೇಕಾಗಿದೆ. 7ನೇ ವಾರ್ಡ್ ಅನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಇದಕ್ಕೆಯಾರೂ ನಾಮಪತ್ರ ಸಲ್ಲಿಸಿಲ್ಲ. ಈ ಗ್ರಾಮದಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚು ವಾಸ ಮಾಡುತ್ತಿದ್ದು, ಸಾಮಾನ್ಯಕ್ಕೆ ಮೀಸಲು ನೀಡಿರುವ ಪರಿಣಾಮ ಸ್ಪರ್ಧೆ ಮಾಡಿದಲ್ಲಿ ಸಾಮಾನ್ಯ ಎಂದು ಪರಿಗಣಿಸುತ್ತಾರೆ ಎಂಬ ಕಾರಣದಿಂದ ಯಾರೊಬ್ಬರೂ ಸ್ಪರ್ಧಿಸಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT