ಸಿರಿಗೆರೆ: ‘ದೇಹದಲ್ಲಿ ಚೈತನ್ಯ ಇದ್ದಾಗ ಒಳ್ಳೆಯ ಕೆಲಸ ಮಾಡಿ ಜನರ ಮನಸ್ಸಿನಲ್ಲಿ ಉಳಿಯುವುದೇ ಬದುಕು’ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭೀಮಸಮುದ್ರ ಸಮೀಪದ ಹಳಿಯೂರು ಗ್ರಾಮದಲ್ಲಿ ಶಾಂತಪ್ಪನವರ ಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಹುಟ್ಟು ಮತ್ತು ಸಾವುಗಳ ಮಧ್ಯೆ ಉತ್ತಮ ಬದುಕು ಸಾಗಿಸುವುದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ತರಳಬಾಳು ಹಿರಿಯ ಸ್ವಾಮೀಜಿಗಳಾದ ಶಿವಕುಮಾರ ಶಿವಾಚಾರ್ಯರು ಜನರಲ್ಲಿ ಶಿವಗಣಾರಾಧನೆಯಂತಹ ಸಮಾರಂಭಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ಬಳಸಿದರು. ನಾಡಿನ ತುಂಬೆಲ್ಲಾ ಶಾಲಾ ಕಾಲೇಜು ತೆರೆದು ಎಲ್ಲರ ಬದುಕಿಗೆ ಸಾರ್ಥಕ ಸೇವೆ ಒದಗಿಸಿ ಸದಾ ಕಾಲ ನೆನಪಿನಲ್ಲಿ ಉಳಿದರು. ಅಂತಹ ಮಹನೀಯರ ಆದರ್ಶಗಳನ್ನು ಜೊತೆಗಿಟ್ಟುಕೊಂಡು ಸಾಗುವುದು ಉತ್ತಮ ಬದುಕು ಎಂದು ತಿಳಿಸಿದರು.
ಶ್ರೀಗಳು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಭಕ್ತಿಯಿಂದ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.