
ಪ್ರಜಾವಾಣಿ ವಾರ್ತೆ
ಚಿಕ್ಕಜಾಜೂರು: ಸಮೀಪದ ಬಿ. ದುರ್ಗ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ರಾಗಿ ಹುಲ್ಲು ಭಸ್ಮವಾಗಿದೆ.
ಗ್ರಾಮದ ತಿಪ್ಪೇರುದ್ರಪ್ಪ ಎಂಬವರ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದ ರಾಗಿಯನ್ನು ಈಚೆಗೆ ಕೊಯ್ಲು ಮಾಡಿದ್ದರು. ಮೇವು ಸಂಗ್ರಹಕ್ಕಾಗಿ, ಯಂತ್ರದಿಂದ ಹುಲ್ಲಿನ ಪೆಂಡಿಗಳನ್ನು ಕಟ್ಟಿ ಇರಿಸಿದ್ದರು.
‘ಪಕ್ಕದ ಹೊಲದಲ್ಲಿ ಮೆಕ್ಕೆಜೋಳದ ತೆನೆ ಮುರಿಯುತ್ತಿರುವಾಗ, ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯು ರೈಲ್ವೆ ರಸ್ತೆ ಕಡೆಯಿಂದ ಗಾಳಿಯ ಮೂಲಕ ವ್ಯಾಪಿಸಿತು. ಮೆಕ್ಕೆಜೋಳದ ಜಮೀನಿಗೆ ಹರಡದಂತೆ ಅದನ್ನು ನಂದಿಸುವ ಯತ್ನ ಮಾಡಲಾಯಿತು. ಗಾಳಿ ವೇಗವಾಗಿದ್ದರಿಂದ ಬೆಂಕಿಯು ರಾಗಿ ಜಮೀನಿಗೂ ಹರಡಿತು. ಅರ್ಧ ಗಂಟೆಯಲ್ಲಿ ಇಡೀ ಜಮೀನಿನಲ್ಲಿದ್ದ ಎಲ್ಲ 110 ರಾಗಿ ಪೆಂಡಿಗಳು ಸುಟ್ಟು ಭಸ್ಮವಾದವು. ₹ 30,000ಕ್ಕೂ ಹೆಚ್ಚು ಮೌಲ್ಯದ ರಾಗಿ ಹುಲ್ಲು ನಷ್ಟವಾಗಿದೆ. ದನ ಕರುಗಳಿಗೆ ಮೇವು ಇಲ್ಲದಂತಾಗಿದೆ’ ಎಂದು ರೈತ ತಿಪ್ಪೇರುದ್ರಪ್ಪ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.