ಚಳ್ಳಕೆರೆ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಹದ ಮಳೆ ಬಿದ್ದಿರುವುದರಿಂದ ಒಣ ಬೇಸಾಯಕ್ಕೆ ಜೀವ ಬಂದಾಗಿದೆ.
ಕುರುಡಿಹಳ್ಳಿ, ಗೊರ್ಲಕಟ್ಟೆ, ದೊಡ್ಡೇರಿ, ಭರಮಸಾಗರ, ಬೊಮ್ಮಸಮುದ್ರ, ಗಾನಪ್ಪನಹಳ್ಳಿ, ಸಿದ್ದಾಪುರ, ಲಕ್ಷ್ಮೀಪುರ, ನಗರಂಗೆರೆ, ಮೀರಾಸಾಬಿಹಳ್ಳಿ, ವಿಡಪನಕುಂಟೆ, ನನ್ನಿವಾಳ, ದುರ್ಗಾವರ, ಕಸ್ತೂರಿ ತಿಮ್ಮನಹಳ್ಳಿ, ರೆಡ್ಡಿಹಳ್ಳಿ, ದೇವರಮರಿಕುಂಟೆ ಮುಂತಾದ ಗ್ರಾಮದಲ್ಲಿ ಉತ್ತಮ ಮಳೆಯಾಗಿದ್ದು ರೈತರಲ್ಲಿ ಮುಖದಲ್ಲಿ ಸಂತಸ ಮೂಡಿಸಿದೆ.
ಮುಂಗಾರು ಹಂಗಾಮಿನ ಬಿತ್ತನೆ ಸಲುವಾಗಿ ವಿವಿಧ ಗ್ರಾಮದ ರೈತರು ಶೇಂಗಾ, ತೊಗರಿ, ಅಲಸಂದೆ, ಹೆಸರು, ಔಡಲ ಮುಂತಾದ ಬಿತ್ತನೆ ಬೀಜಗಳ ಜೊತೆಗೆ ರಸಗೊಬ್ಬರ ಸಂಗ್ರಹಿಸಿಕೊಂಡು ಭೂಮಿ ಉಳುಮೆಗೆ ಮಳೆಯನ್ನೇ ಎದುರು ನೋಡುತ್ತಿದ್ದರು. ಈಗ ಹದ ಮಳೆ ಬಿದ್ದಿರುವುದರಿಂದ ಅನುಕೂಲವಾಗಿದ್ದು, ಭೂಮಿ ಹಸನು ಮಾಡಿಕೊಂಡು 10-15 ದಿನದಲ್ಲಿ ಮತ್ತೊಮ್ಮೆ ಮಳೆ ಬಿದ್ದರೆ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ರೈತ ಮುಖಂಡ ಕೆ.ಪಿ.ಭೂತಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.