ADVERTISEMENT

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 5:39 IST
Last Updated 1 ನವೆಂಬರ್ 2022, 5:39 IST

ಚಿತ್ರದುರ್ಗ: ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ 14 ಜನರನ್ನು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉಪವಿಭಾಗಾಧಿಕಾರಿ ಆರ್‌.ಚಂದ್ರಯ್ಯ ನೇತೃತ್ವದ ಆಯ್ಕೆ ಸಮಿತಿಯು ಆಯ್ಕೆ ಅಂತಿಮಗೊಳಿಸಿದೆ. ಪ್ರಶಸ್ತಿಗೆ ಆಯ್ಕೆಯಾದವರನ್ನು ನ. 1ರಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ.

ಪ್ರಶಸ್ತಿಗೆ ಭಾಜನರಾದವರು: ಜವಳಿ ಶಾಂತ ಕುಮಾರ್‌ (ಚಿತ್ರಕಲೆ), ಕೆ.ಬಿ.ಕೃಷ್ಣಪ್ಪ (ರಂಗಭೂಮಿ), ಕೆ.ಮೀನಾಕ್ಷಿ ಭಟ್‌ (ಸಂಗೀತ), ಎಚ್‌.ನಿಂಗಪ್ಪ (ಜಾನಪದ), ಡಾ.ಉಮೇಶ್‌ ಬಾಬು ಮಠದ್‌ (ಸಾಹಿತ್ಯ), ಬಿ.ಕೆ.ರಹಮತ್‌ವುಲ್ಲಾ (ಸಮಾಜ ಸೇವೆ), ನರೇನಹಳ್ಳಿ ಅರುಣ ಕುಮಾರ್‌ (ಪತ್ರಿಕೋದ್ಯಮ), ಕೆ.ಎ.ಆಶ್ರಿತ್‌ (ಸಂಗೀತ-ಕೀ ಬೋರ್ಡ್‌ ವಾದಕ), ಅರುಂಧತಿ (ರಂಗಭೂಮಿ ಮತ್ತು ಸಮಾಜ ಸೇವೆ), ಡಿ.ಆರ್‌.ಸುರೇಂದ್ರನಾಥ್‌ (ಚಿತ್ರಕಲೆ), ಎಚ್‌.ಆನಂದ ಕುಮಾರ್‌ (ಲೇಖಕ), ಡಾ.ತಿಮ್ಮಣ್ಣ (ಶಿಕ್ಷಣ), ಎಂ.ಬಿ.ಮುರಳಿ (ಯೋಗ) ಹಾಗೂ ಜೆ.ತಿಪ್ಪೇಸ್ವಾಮಿ (ಸಾಹಿತ್ಯ).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.