ಮೊಳಕಾಲ್ಮುರು: ತಾಲ್ಲೂಕಿನ ರಾಂಪುರದಲ್ಲಿ ಬುಧವಾರ ಪೊಲೀಸರು ಆಟೊಗಳ ದಾಖಲಾತಿಗಳ ಪರಿಶೀಲನೆ ಕಾರ್ಯ ನಡೆಸಿದರು.
ಠಾಣೆ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಆಟೊಗಳಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಯಾಣಿಕರ ಆಟೊ ಹೊಂದಿರುವ ಪ್ರದೇಶವಾಗಿ ಹೊರಹೊಮ್ಮಿದೆ.
ಸಂಭವನೀಯ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಆಟೊಗಳಿಗೆ ಸಂಬಂಧಪಟ್ಟ ಪರವಾನಗಿ, ತೆರಿಗೆ ಪಾವತಿ, ಚಾಲಕರ ಪರವಾನಗಿ, ನೋಂದಣಿ ಪತ್ರ, ವಿಮೆ ಪಾವತಿ ಸೇರಿದಂತೆ ಹಲವು ದಾಖಲಾತಿಗಳ ಪರಿಶೀಲನೆ ನಡೆಸಲಾಯಿತು. ವಿಮೆ ಇಲ್ಲದ ಆಟೊಗಳ ಮಾಲೀಕರಿಗೆ ಸಂಜೆ ಒಳಗಾಗಿ ವಿಮೆ ಮಾಡಿಸುವಂತೆ ಗಡುವು ನೀಡಿ ಸ್ಥಳದಲ್ಲೇ ಕೆಲ ಆಟೊಗಳಿಗೆ ವಿಮೆ ಮಾಡಿಸಲಾಯಿತು ಎಂದು ಪಿಎಸ್‌ಐ ಮಹೇಶ್ ಹೊಸಪೇಟೆ ತಿಳಿಸಿದರು.
ಹಲವು ಆಟೊಗಳಲ್ಲಿ ಅಳವಡಿಸಿದ್ದ ಎಲ್‌ಇಡಿ ಬಲ್ಬ್‌ಗಳು, ಕರ್ಕಶ ಹಾರ್ನ್‌ಗಳು ಮತ್ತು ಮ್ಯೂಸಿಕ್ ಬಾಕ್ಸ್‌ಗಳನ್ನು ತೆರವುಗೊಳಿಸಲಾಯಿತು. ಮತ್ತೆ ಅಳವಡಿಸಿದಲ್ಲಿ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಕಾನೂನು ಪ್ರಕಾರ ಆಟೊಗಳನ್ನು ಓಡಿಸಬೇಕು, ಇಲ್ಲದಿದ್ದರೆ ಮುಲಾಜಿಲ್ಲದೆ ಸೀಜ್ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.