ADVERTISEMENT

ಯುವತಿ ಮೇಲೆ ಅತ್ಯಾಚಾರ ಆರೋಪ: ಸಿಪಿಐ ಅಮಾನತು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 19:17 IST
Last Updated 24 ಅಕ್ಟೋಬರ್ 2022, 19:17 IST
ಜಿ.ಬಿ.ಉಮೇಶ್
ಜಿ.ಬಿ.ಉಮೇಶ್   

ಚಿತ್ರದುರ್ಗ: ನಿವೇಶನ ಕುರಿತ ವಿವಾದ ಬಗೆಹರಿಸುವ ನೆಪದಲ್ಲಿ ಯುವತಿಯೊಬ್ಬರನ್ನು ಲೈಂಗಿಕವಾಗಿದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಜಿಲ್ಲೆಯ ಚಳ್ಳಕೆರೆ ಪೊಲೀಸ್‌ ಠಾಣೆ ಸಿಪಿಐ ಜಿ.ಬಿ.ಉಮೇಶ್‌ ವಿರುದ್ಧ ಆತ್ಯಾಚಾರ ಪ್ರಕರಣ ದಾಖಲಾಗಿದೆ.

‘5 ವರ್ಷಗಳಿಂದ ನಿರಂತರವಾಗಿ ಆತ್ಯಾಚಾರವೆಸಗಿದ್ದಲ್ಲದೆ, ನಾಲ್ಕೈದು ಬಾರಿ ಗರ್ಭಪಾತ ಮಾಡಿಸಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಬಿ.ಇಡಿ ಓದುತ್ತಿರುವ ಯುವತಿಯು ಭಾನುವಾರ ಚಿತ್ರದುರ್ಗದ ಮಹಿಳಾ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅತ್ಯಾಚಾರ ಮತ್ತು ಜೀವ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಸಿಪಿಐ ಉಮೇಶ್‌ ಅವರನ್ನುಸೇವೆಯಿಂದ ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್‌ ಆದೇಶಿಸಿದ್ದಾರೆ.

ADVERTISEMENT

ಭಾನುವಾರ ದೂರು ದಾಖಲಾದ ನಂತರ ಸಿಪಿಐ ಜಿ.ಬಿ.ಉಮೇಶ್ ನಾಪತ್ತೆಯಾಗಿದ್ದಾರೆ.

ಘಟನೆ ವಿವರ:‘5 ವರ್ಷಗಳ ಹಿಂದೆ ಉಮೇಶ್‌ ದಾವಣಗೆರೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದ ವೇಳೆ ನಿವೇ ಶನದ ವಿವಾದ ಬಗೆಹರಿಸುವ ವಿಚಾರ ಕುರಿತು ಸಂಪರ್ಕಿಸಿದಾಗ ನೆರವಿಗೆ ಬಂದಿದ್ದರು. ಬಳಿಕ ಈ ನೆರವನ್ನೇ ನೆಪವಾಗಿಸಿಕೊಂಡು ಅತ್ಯಾಚಾರ ಎಸಗಿ ದ್ದಾರೆ.ಈಗಾಗಲೇ ಉಮೇಶ್‌ ಅವರಿಗೆ ಇಬ್ಬರು ಹೆಂಡತಿಯರಿದ್ದಾರೆ. ನನ್ನನ್ನು 3ನೇ ಹೆಂಡತಿಯಂತೆ ಇರಬೇಕು ಎಂಬ ಒತ್ತಡ ಹೇರಿದ್ದಾರೆ. ಮಾತು ಕೇಳದಿದ್ದರೆ ನಿವೇಶನ ಸಿಗದಂತೆ ಮಾಡುತ್ತೇನೆ. ನಿಮ್ಮ ಕುಟುಂಬವನ್ನು ಬೀದಿಗೆ ತರುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಯುವತಿ ದೂರಿನಲ್ಲಿ ವಿವರಿಸಿ ದ್ದಾರೆ.

ಈ ಮಧ್ಯೆ, ಸೋಮವಾರ ಠಾಣೆಗೆ ತೆರಳಿ ಹೇಳಿಕೆ ನೀಡಿರುವ ಯುವತಿಯು, ‘ಮಾನಸಿಕ ಒತ್ತಡದಿಂದ ನಾನು ದೂರು ನೀಡಿದ್ದೇನೆ. ಉಮೇಶ್‌ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನೀಡಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.