ADVERTISEMENT

ಚೆಲುಮೆರುದ್ರಸ್ವಾಮಿ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 4:14 IST
Last Updated 31 ಜನವರಿ 2023, 4:14 IST
ನಾಗಗೊಂಡನಹಳ್ಳಿಯ ಚೆಲುಮೆರುದ್ರಸ್ವಾಮಿಯ ರಥೋತ್ಸವ ಸೋಮವಾರ ಅದ್ಧೂರಿಯಾಗಿ ನಡೆಯಿತು.
ನಾಗಗೊಂಡನಹಳ್ಳಿಯ ಚೆಲುಮೆರುದ್ರಸ್ವಾಮಿಯ ರಥೋತ್ಸವ ಸೋಮವಾರ ಅದ್ಧೂರಿಯಾಗಿ ನಡೆಯಿತು.   

ಪರಶುರಾಂಪುರ: ಹೋಬಳಿಯ ನಾಗಗೊಂಡನ ಹಳ್ಳಿಯ ಚೆಲುಮೆರುದ್ರ ಸ್ವಾಮಿಯ ರಥೋತ್ಸವ ಸೋಮವಾರ ಅದ್ಧೂರಿಯಾಗಿ ನಡೆಯಿತು.

ದೇವಸ್ಥಾನದ ಪಾದಗಟ್ಟೆಯವರೆಗೂ ತೇರನ್ನು ಎಳೆದ ಭಕ್ತರು ರಥಕ್ಕೆ ಬಾಳೆಹಣ್ಣುಗಳನ್ನು ಎಸೆದು ರಥದ ಗಾಲಿಗೆ ತೆಂಗಿನ ಕಾಯಿಯನ್ನು ಒಡೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೆ ಸುತ್ತ– ಮುತ್ತಲ ಗ್ರಾಮಗಳಾದ ಹಾಲಿಗೊಂಡನಹಳ್ಳಿ, ನಾಗಗೊಂಡನಹಳ್ಳಿ, ಹರವಿ ಗೊಂಡನಹಳ್ಳಿ, ಜಾಜೂರು, ಕಾಮಸಮುದ್ರ, ತಪ್ಪಗೊಂಡನಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಜನರು ಹಾಜರಿದ್ದರು.

ಮುಕ್ತಿ ಭಾವುಟವನ್ನು ಹರವಿಗೊಂಡನಹಳ್ಳಿಯ ವೇದಾವತಿ ನದಿ ನೀರು ಮತ್ತು ಮರಳು ರಕ್ಷಣಾ ಸಮಿತಿ ಅಧ್ಯಕ್ಷ ಯೋಗನಂದಾ ಮೂರ್ತಿ ಅವರು ₹1.02 ಲಕ್ಷಕ್ಕೆ ಪಡೆದುಕೊಂಡರು.

ADVERTISEMENT

ಶಾಸಕ ಟಿ.ರಘುಮೂರ್ತಿ, ಜೆಡಿಎಸ್ ನಿಯೋಜಿತ ಆಭ್ಯರ್ಥಿ ಎಂ.ರವೀಶ ಕುಮಾರ್, ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕೆ.ಟಿ. ಕುಮಾರಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.