ಚಿತ್ರದುರ್ಗ: ‘ಮಾಜಿ ಸಂಸದ ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ. ಸಂವಿಧಾನ ಬದಲಿಸುತ್ತೇವೆ ಎಂದಿದ್ದ ಆತನ ಹೇಳಿಕೆಗೆ ಅರ್ಥವಿಲ್ಲ. ಬಿಜೆಪಿಯು ಸಂವಿಧಾನವನ್ನು ದೇಶದ ಆಡಳಿತ ಗ್ರಂಥ ಎಂದೇ ಸ್ವೀಕರಿಸಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ಬಿಜೆಪಿ ವತಿಯಿಂದ ನಗರದ ಕ್ರೀಡಾಭವನದಲ್ಲಿ ಗುರುವಾರ ನಡೆದ ‘ಸಂವಿಧಾನ ಸನ್ಮಾನ ಅಭಿಯಾನ’ದಲ್ಲಿ ಮಾತನಾಡಿದ ಅವರು ‘ಸಂವಿಧಾನ ಬದಲಾವಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿಲ್ಲ. ಆರ್‌ಎಸ್‌ಎಸ್ ಮುಖಂಡರು ಮಾತನಾಡಿಲ್ಲ. ಮಾತಿನ ಭರದಲ್ಲಿ ಅನಂತಕುಮಾರ ಹೆಗಡೆ ಆಡಿತ ಮಾತುಗಳಿಗೆ ಮನ್ನಣೆ ಕೊಡಬೇಕಾಗಿಲ್ಲ’ ಎಂದರು.
‘ದೇಶವೇ ಮೊದಲು ಎಂಬ ತತ್ವವನ್ನು ಬಿಜೆಪಿ ಮುಖಂಡರು ಪಾಲಿಸುತ್ತಿದ್ದಾರೆ. ಸಂವಿಧಾನವನ್ನು ದೇಶದ ಒಂದು ಮಹಾನ್ ಗ್ರಂಥ ಎಂದು ಸ್ವೀಕರಿಸಿದ್ದೇವೆ’ ಎಂದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರು ನೆಹರೂ ಕುಟುಂಬದ ಅಣತಿಯಂತೆ ನಡೆಯುತ್ತಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.