ADVERTISEMENT

ನಾಯಕನಹಟ್ಟಿ | ಸಂಭ್ರಮಕ್ಕೆ ಸಾಕ್ಷಿಯಾದ 77ನೇ ಗಣರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:19 IST
Last Updated 27 ಜನವರಿ 2026, 7:19 IST
ನಾಯಕನಹಟ್ಟಿ ಪಟ್ಟಣದ ಎಸ್.ಟಿ.ಎಸ್.ಆರ್ ವಿದ್ಯಾಸಂಸ್ಥೆಯ ಆವರದಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸದ ಪ್ರಯುಕ್ತ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಮಂಜುಳಾ ವಿದ್ಯಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿದರು 
ನಾಯಕನಹಟ್ಟಿ ಪಟ್ಟಣದ ಎಸ್.ಟಿ.ಎಸ್.ಆರ್ ವಿದ್ಯಾಸಂಸ್ಥೆಯ ಆವರದಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸದ ಪ್ರಯುಕ್ತ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಮಂಜುಳಾ ವಿದ್ಯಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿದರು    

ನಾಯಕನಹಟ್ಟಿ: ಪಟ್ಟಣ ಪಂಚಾಯಿತಿ ಕಚೇರಿ, ನಾಡಕಚೇರಿ, ಪೊಲೀಸ್‌ಠಾಣೆ ಸೇರಿದಂತೆ ಎಲ್ಲ ಶಾಲೆ– ಕಾಲೇಜುಗಳಲ್ಲಿ 77ನೇ ಗಣರಾಜ್ಯೊತ್ಸವವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಮಂಜುಳಾ, ಎಸ್.ಟಿ.ಎಸ್.ಆರ್ ವಿದ್ಯಾಸಂಸ್ಥೆಯ ಆವರಣದಲ್ಲಿ ಪಟ್ಟಣ ಪಂಚಾಯಿತಿ ಮತ್ತು ಎಲ್ಲ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಧ್ವಜಾರೋಹಣ ನೆರವೇರಿಸಿದರು.

ಮುಖ್ಯಾಧಿಕಾರಿ ಒ.ಶ್ರೀನಿವಾಸ್ ಮಾತನಾಡಿದರು. ಉಪಾಧ್ಯಕ್ಷೆ ಪಿ.ಬೋಸಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಸದಸ್ಯರಾದ ಎಂ.ಟಿ.ಮಂಜುನಾಥ, ಟಿ.ಮಹೇಶ್ವರಿ, ಕೆ.ಪಿ.ತಿಪ್ಪೇಸ್ವಾಮಿ, ಗುರುಶಾಂತಮ್ಮ, ಡಿ.ಸುನಿತಾ, ಈರಮ್ಮ, ಜೆ.ಆರ್.ರವಿಕುಮಾರ್, ತಿಪ್ಪೇಶ್, ಬಿ.ವಿನುತಾ, ಎನ್.ಮಹಾಂತಣ್ಣ, ಪಿ.ಓಬಯ್ಯ, ಸರ್ವಮಂಗಳಾ, ಪಿಎಸ್‌ಐ ಜಿ.ಪಾಂಡುರಂಗ, ಮುಖ್ಯಾಧಿಕಾರಿ ಒ.ಶ್ರೀನಿವಾಸ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಮುಖಂಡರಾದ ಎಂ.ವೈ.ಟಿ.ಸ್ವಾಮಿ, ಕೆ.ಎಂ.ನಾಗರಾಜ್, ಎಸ್.ಟಿ.ಬೋರಸ್ವಾಮಿ, ಪ್ರಾಚಾರ್ಯ ಸಿ.ಶ್ರೀನಿವಾಸ್, ಉಪಪ್ರಾಚಾರ್ಯ ಬಿ.ಆರ್.ರಮೇಶ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.