ಹಿರಿಯೂರು: ಲೋಕೋಪಯೋಗಿ ಇಲಾಖೆಯಿಂದ ₹ 25 ಕೋಟಿ ವೆಚ್ಚದಲ್ಲಿ ನಗರದ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ನಗರಸಭೆಯ ಜಲ ಶುದ್ಧೀಕರಣ ಘಟಕದಿಂದ ವಾಣಿವಿಲಾಸಪುರ ಗ್ರಾಮದವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ತಾಲ್ಲೂಕಿನಲ್ಲಿರುವ ದೊಡ್ಡ ದೊಡ್ಡ ಗ್ರಾಮಗಳ ಮೂಲಕ ರಾಜ್ಯ ಹೆದ್ದಾರಿ ಸಂಪರ್ಕಿಸುವಂತೆ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ನಗರಸಭೆ ವತಿಯಿಂದ ರಸ್ತೆಯಲ್ಲಿನ ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವ ಕಾರ್ಯ ಕೈಗೊಂಡಾಗ ಸ್ಥಳೀಯರು ವಿರೋಧಿಸಿದ್ದರು. ಶಾಶ್ವತ ರಸ್ತೆ ನಿರ್ಮಿಸುವಂತೆ ಪ್ರತಿಭಟನೆ ನಡೆಸಿದ್ದರು. ಆಗ ಜನರಿಗೆ ನೀಡಿದ್ದ ಭರವಸೆಯಂತೆ ವಾಣಿವಿಲಾಸಪುರ ಗ್ರಾಮದವರೆಗಿನ ರಸ್ತೆಗೆ ಡಾಂಬರು ಹಾಕಿಸಲಾಗುತ್ತಿದೆ ಎಂದು ನಗರಸಭೆ ಸದಸ್ಯೆ ಮಮತಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಖಾದಿ ರಮೇಶ್, ಕಂದಿಕೆರೆ ಸುರೇಶ್ ಬಾಬು, ಈರಲಿಂಗೇಗೌಡ, ದೊಡ್ಡಘಟ್ಟ ಶಿವಕುಮಾರ್, ವಿ. ಶಿವಕುಮಾರ್, ಗಿಡ್ಡೋನಬಹಳ್ಳಿ ಅಶೋಕ್, ತಿಮ್ಮರಾಯಪ್ಪ, ವೆಂಕಟೇಶ್, ಮುರ್ತುಜ, ರಾಮಕೃಷ್ಣ, ಹಬೀಬ್, ಮುನ್ನಾ, ರಾಜೇಶ್ವರಿ, ಧನಂಜಯ್, ನಾಗರಾಜ್, ಚಿಕ್ಕಣ್ಣ, ಬಸವರಾಜ್, ನರಸಿಂಹಣ್ಣ, ರಾಮು, ಜಯಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.