ಹೊಸದುರ್ಗ: ‘ನಮ್ಮ ಧರ್ಮವನ್ನು ಉಳಿಸಲು ಕಟ್ಟಿಬದ್ಧರಾಗಿ ಹೋರಾಡುವ ಅವಶ್ಯಕತೆ ಇದೆ. ಈ ಸಮಾಜ ಮತ್ತು ಹಿಂದೂ ಧರ್ಮದ ಉಳಿವಿಗಾಗಿ ನಾವು ಸಮಯವನ್ನು ಕೊಡಲೇಬೇಕಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್ಎಸ್)ದ ವ್ಯವಸ್ಥಾ ಪ್ರಮುಖ ಲೋಹಿತಾಶ್ವ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರು ವರ್ಷದ ಸ್ಮರಣಾರ್ಥ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಮ್ಮ ಹಿರಿಯರು ನಾವು ಮಾಡುವ ಎಲ್ಲಾ ಕೆಲಸಗಳಿಗೆ ಸಂಸ್ಕಾರ ಕೊಡುವ ಮೂಲಕ ಅದನ್ನು ಸಂಸ್ಕೃತಿಯನ್ನಾಗಿಸುವ ಕೆಲಸ ಮಾಡಿ ಹೋಗಿದ್ದಾರೆ. ಅಮ್ಮ ಮಾಡಿದ ಅಡಿಗೆಯನ್ನು ದೇವರ ಮುಂದಿಟ್ಟು ತಿಂದರೆ ಅದು ಪ್ರಸಾದವಾಗುತ್ತದೆ. ಇದು ನಮ್ಮ ಸಂಸ್ಕೃತಿಯ ಪ್ರತೀಕ. ನಾವೆಲ್ಲ ಹಿಂದೂಗಳಾಗಿ ಹುಟ್ಟಿದ್ದೇವೆ ಎಂಬುದೇ ಪುಣ್ಯ’ ಎಂದರು.
‘ಇಂದು ಲಾಹೋರ್‌ನಲ್ಲಿ ಹಬ್ಬಗಳು ಮಾಯವಾಗಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಸಂಕಷ್ಟದಲ್ಲಿದೆ. ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋದಂತೆಲ್ಲ ಆ ಜಾಗ ಭಯೋತ್ಪಾದಕರ ಕೈವಶವಾಗುತ್ತದೆ’ ಎಂದು ಹೇಳಿದರು.
ಆರ್‌ಎಸ್ಎಸ್ ಹೊಸದುರ್ಗ ಕಾರ್ಯವಾಹ ವಾಸುದೇವ ಲಕ್ಕೇನಹಳ್ಳಿ ಸೇರಿದಂತೆ ಸ್ವಯಂ ಸೇವಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.