ADVERTISEMENT

ಬಾಲಕಿಗೆ ದೆವ್ವ ಹಿಡಿದಿದೆ, ಲೈಂಗಿಕ ಸುಖ ನೀಡಬೇಕು ಎಂದು ಕಿರುಕುಳ ನೀಡಿದ ಮೌಲ್ವಿ

ಚಿತ್ರದುರ್ಗ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 7:00 IST
Last Updated 3 ಜೂನ್ 2024, 7:00 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರದುರ್ಗ: ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮೌಲ್ವಿ ಸೇರಿ ಇಬ್ಬರನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೌಲ್ವಿ ಅಬ್ದುಲ್ ರೆಹಮಾನ್, ಬಾಲಕಿಯ ಅಣ್ಣ ಬಂಧಿತರು. ಬಾಲಕಿ ಮೂರು ವರ್ಷಗಳಿಂದ ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದಳು.

ADVERTISEMENT

ಬಾಲಕಿಗೆ ದೆವ್ವ ಹಿಡಿದಿದೆ, ಗಾಳಿ ಸೋಕಿದೆ ಎಂದು ಕುಟುಂಬದ ಸದಸ್ಯರಿಗೆ ಮೌಲ್ವಿ ನಂಬಿಸಿದ್ದಾನೆ. ದೈಹಿಕ ಸುಖ ನೀಡಿದರೆ ದೆವ್ವ ಬಿಡುತ್ತದೆ ಎಂದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.