ADVERTISEMENT

ವಾಲುಕೇಶ್ವರ ಸ್ವಾಮೀಜಿ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 20:46 IST
Last Updated 19 ಸೆಪ್ಟೆಂಬರ್ 2019, 20:46 IST
ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ
ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ   

ಚಿತ್ರದುರ್ಗ: ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನದ ಪೀಠಾಧಿಪತಿಯಾಗಿದ್ದ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ ಅವರ ಶತಮಾನೋತ್ಸವ ಸಮಾರಂಭವನ್ನು ಇಲ್ಲಿನ ಶ್ರೀನಿವಾಸ ಅವಧಾನಿ ಪ್ರಾಂಗಣದಲ್ಲಿ ಸೆ.22ರಂದು ಹಮ್ಮಿಕೊಳ್ಳಲಾಗಿದೆ.

ಚಿತ್ರದುರ್ಗ ಸಮೀಪದ ಹೊರೆಕರೆದೇವರಪುರ ಗ್ರಾಮದ ವಾಲುಕೇಶ್ವರ ಭಾರತಿ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ವಿದ್ವಾನ್‌ ಲಿಂಗಾಶಾಸ್ತ್ರಿ. ಅನಂತರಾಮಶಾಸ್ತ್ರಿ ಹಾಗೂ ಸಾವಿತ್ರಮ್ಮ ಪುತ್ರರಾದ ಲಿಂಗಾಶಾಸ್ತ್ರಿ ಮೈಸೂರಿನಲ್ಲಿ ಸಂಸ್ಕೃತ ವಿದ್ವತ್‌ ಶಿಕ್ಷಣ ಪಡೆದಿದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರಿಗೆ ದಸರಾ ಮಹೋತ್ಸವದಲ್ಲಿ ಆಶೀರ್ವಚನ ನೀಡುತ್ತಿದ್ದರು ಎಂದು ಆದಿಗುರು ಶಂಕರಚಾರ್ಯ ವಿಚಾರ ವೇದಿಕೆಯ ವೆಂಕಟಸುಬ್ಬು ಮೋಕ್ಷಗುಂಡಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಶಿವಮೊಗ್ಗ ಸಮೀಪದ ತುಂಗಾ–ಭದ್ರ ನದಿಗಳ ಪವಿತ್ರ ಸಂಗಮ ಕ್ಷೇತ್ರವಾದ ಕೂಡಲಿಯಲ್ಲಿ 1976ರಲ್ಲಿ ನರಸಿಂಹ ಭಾರತಿ ಸ್ವಾಮೀಜಿ ಅವರಿಂದ ಸನ್ಯಾಸ ದೀಕ್ಷೆ ಪಡೆದರು. ಸಚ್ಚಿದಾನಂದ ವಾಲುಕೇಶ್ವರ ಭಾರತಿ ಎಂದು ನಾಮಕರಣ ಮಾಡಲಾಯಿತು. ಸುಮಾರು 40 ವರ್ಷ ಪೀಠಾಧಿಪತಿಗಳಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.