ಸಿರಿಗೆರೆ: ಕ್ರಿಕೆಟ್ ಅನ್ನು ಉದ್ಯಮವನ್ನಾಗಿ ಮಾಡಿಕೊಂಡು, ಆರ್‌ಸಿಬಿ ಆಟಗಾರರಿಗೆ ಏರ್ಪಡಿಸಿದ್ದ ವಿಜಯೋತ್ಸವದ ಸಂದರ್ಭದಲ್ಲಿ ಆಗಿರುವ ಮುಗ್ಧ ಜನರ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಇ. ಜಗದೀಶ್ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಐಪಿಎಲ್ ಆಟಗಾರರಿಗೆ ನಾಡು ನುಡಿ, ಪ್ರಾದೇಶಿಕ ಸೊಬಗಿನ ಅರಿವೇ ಇಲ್ಲ. ಯಾರು ಹೆಚ್ಚು ಹಣ ಕೊಡುತ್ತಾರೋ ಆ ತಂಡದಲ್ಲಿ ಆಡುವ ಇವರಿಗೆ ಬದ್ಧತೆಯೇ ಇರುವುದಿಲ್ಲ. ಇಂತಹವರಿಗೆ ರಾಜ್ಯ ಸರ್ಕಾರ ಸನ್ಮಾನ ಏರ್ಪಡಿಸಿದ್ದು ಸೂಕ್ತವಲ್ಲ’ ಎಂದಿದ್ದಾರೆ.
ಸರ್ಕಾರವೇ ಮುಂದೆ ನಿಂತು ಪ್ರೋತ್ಸಾಹಿಸುವುದು ಪರೋಕ್ಷವಾಗಿ ಯುವ ಪೀಳಿಗೆಯ ಬದುಕನ್ನು ಕಿತ್ತುಕೊಂಡಂತೆ. ಐಪಿಎಲ್ ಆಟವಾಗಿ ಉಳಿದಿಲ್ಲ. ಅದೊಂದು ಉದ್ಯಮ ಕ್ಷೇತ್ರವಷ್ಟೇ ಅಲ್ಲ, ಜೂಜು ಅಡ್ಡೆಯಾಗಿ ಬೇರೂರಿದೆ. ಇಂತಹ ಆಟಕ್ಕೆ ಸರ್ಕಾರ ಪ್ರೋತ್ಸಾಹಿಸಬಾರದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.