ADVERTISEMENT

ಸಿರಿಗೆರೆ: ಗಮನ ಸೆಳೆದ ಹಸು, ಶ್ವಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 5:18 IST
Last Updated 22 ಸೆಪ್ಟೆಂಬರ್ 2022, 5:18 IST
ಸಿರಿಗೆಯಲ್ಲಿ ಮಿಶ್ರ ತಳಿ ಹಸು ಮತ್ತು ಕರುಗಳ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು (ಎಡಚಿತ್ರ). ಗುರುಶಾಂತೇಶ್ವರ ಭವನದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿತ್ತು
ಸಿರಿಗೆಯಲ್ಲಿ ಮಿಶ್ರ ತಳಿ ಹಸು ಮತ್ತು ಕರುಗಳ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು (ಎಡಚಿತ್ರ). ಗುರುಶಾಂತೇಶ್ವರ ಭವನದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿತ್ತು   

ಸಿರಿಗೆರೆ: ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಪುಣ್ಯಸ್ಮರಣೆ ಅಂಗವಾಗಿ ಬುಧವಾರ ನಡೆದ ಮಿಶ್ರ ತಳಿ ಹಸು ಮತ್ತು ಕರುಗಳ ಪ್ರದರ್ಶನ ಗಮನ ಸೆಳೆಯಿತು.

ಲ್ಯಾಬ್ರೆಡಾರ್‌, ಗೋಲ್ಡನ್ ರಿಟ್ರೀವರ್, ಜರ್ಮನ್ ಷೆಫರ್ಡ್ ತಳಿಯ ಸಾಕುನಾಯಿಗಳು ಹಾಗೂ ಸಿಂಧಿ ಹಸು ಮತ್ತು ದೇಸಿ ಹಸುಗಳು ಪ್ರದರ್ಶನದಲ್ಲಿ ಕಂಡುಬಂದವು.

ಹಸುಗಳ ತಪಾಸಣೆ ಮತ್ತು ಚಿಕಿತ್ಸೆ ಹಾಗೂ ಶ್ವಾನಗಳಿಗೆ ಲಸಿಕೆ ನೀಡಲಾಯಿತು. ಸಿರಿಗೆರೆ, ಜಮ್ಮೇನಹಳ್ಳಿ, ಹಳೇರಂಗಾಪುರ, ಹಳವುದರ ಮತ್ತು ಓಬವ್ವನಾಗ್ತಿಹಳ್ಳಿ ರೈತರು ಭಾಗವಹಿಸಿ ಬಹುಮಾನ ಪಡೆದರು.

ADVERTISEMENT

ಬಹುಮಾನ ವಿತರಣೆ ಕಾರ್ಯಕ್ರಮವನ್ನು ಶಿಮುಲ್ ನಿರ್ದೇಶಕ ಪಿ. ತಿಪ್ಪೇಸ್ವಾಮಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಮಿಶ್ರ ತಳಿ ಹಸುಗಳನ್ನು ಸಾಕುವುದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದು, ಕೃಷಿ ಹಾಗೂ ಪಶುಸಂಗೋಪನೆ ಚಟುವಟಿಕೆ ಗ್ರಾಮೀಣ ಭಾಗದ ರೈತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಮುಖ್ಯ ಪಾತ್ರವಹಿಸಿವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಿ. ದೇವರಾಜು ಹೇಳಿದರು.

ಪಶುಸಂಗೋಪನೆ ಈ ಹಂತಕ್ಕೆ ಬರಲು ಪಶುವೈದ್ಯಕೀಯ ಇಲಾಖೆ ಹಾಗೂ ಪಶುಪಾಲನೆ ಕೊಡುಗೆ ಅಪಾರ ಎಂದುಅಧ್ಯಕ್ಷತೆ ವಹಿಸಿದ್ದ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಎನ್. ಕುಮಾರ್ಹೇಳಿದರು.

ಇದೇ ಪ್ರಥಮವಾಗಿ ಸಾಕುನಾಯಿಗಳಿಗೆ ‘ಉಚಿತ ರೇಬಿಸ್ ಲಸಿಕೆ ಅಭಿಯಾನ’ದಡಿಯಲ್ಲಿ ವಿವಿಧ ತಳಿಗಳಿಗೆ ಲಸಿಕೆ, ಜಂತು ನಾಶಕ ಔಷದಿ, ರೋಗ ನಿರೋಧಕ ಲಸಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ ಸಿದ್ದೇಶ್, ಸಹಾಯಕ ನಿರ್ದೇಶಕ ಡಾ.ಎನ್. ಕುಮಾರ್, ನಿವೃತ್ತ ತಜ್ಞ ವೈದ್ಯಾಧಿಕಾರಿ ಟಿ.ಎಚ್. ಶಂಕರಪ್ಪ, ಡಾ.ಸತೀಶ್, ಡಾ.ಮುರುಗೇಶ್, ಡಾ.ರಂಗಸ್ವಾಮಿ, ಡಾ.ರಕ್ಷಿತ್, ಡಾ.ಮಲ್ಲಿಕಾರ್ಜುನ ಹಾಗೂ ಡಾ. ಸಂಜಯ್, ಹಿರಿಯ ಪಶುವೈದ್ಯಾಧಿಕಾರಿ ಎಸ್.ಶಶಿಧರ್, ಈ.ಸ್ವಾಮಿ, ಜಾನುವಾರು ಅಧಿಕಾರಿಗಳಾದ ನಿಂಗಹನುಮಂತಪ್ಪ, ಶಿವಗಾನಾಯ್ಕ್, ತಿಪ್ಪೇಸ್ವಾಮಿ, ಸಿದ್ದೇಶ್ವರಯ್ಯ ಎನ್.ಜಿ. ಇದ್ದರು.

ಶಿಬಿರ ನಾಳೆ:ರಕ್ತದಾನ ಹಾಗೂ ಉಚಿತ ನೇತ್ರ ಚಿಕಿತ್ಸಾ ಶಿಬಿರ ಸೆ.23ರಂದು ಬೆಳಿಗ್ಗೆ 10.30ಕ್ಕೆ ಗುರುಶಾಂತೇಶ್ವರ
ದಾಸೋಹ ಭವನದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.