
ಹೊಸದುರ್ಗ: ಸಂಸಾರಕ್ಕೆ ಸದ್ಗುಣ ಸದ್ಭಾವನೆ ಬೇಕು. ಇದು ಪ್ರತಿಯೊಬ್ಬರ ಮನೆಯಲ್ಲಿರಬೇಕು. ಪೋಷಕರು ಇದನ್ನು ಅಳವಡಿಸಿಕೊಳ್ಳಬೇಕು. ಪ್ರಸ್ತುತ ಎಲ್ಲವೂ ಇದೆ, ಏನು ಇಲ್ಲದಂತೆ ಭಾಸವಾಗುತ್ತಿದೆ. ಪೋಷಕರು ಸರಿಯಾದರೆ, ವ್ಯವಸ್ಥೆಯೂ ಸರಿಯಾಗಿರುತ್ತದೆ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ನಾಟಕೋತ್ಸವ ಕಾರ್ಯಕ್ರಮದಲ್ಲಿ’ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜ ನೈತಿಕವಾಗಿ ಅಧಃಪತನವಾಗುತ್ತಿದೆ. ಪ್ರಸ್ತುತ ತೋರಿಕೆ ಜೀವನ ಹೆಚ್ಚಾಗುತ್ತಿದೆ. ತೋರಿಕೆ ಜೀವನಕ್ಕಿಂತ ಮೌಲ್ಯ ಮುಖ್ಯ. ಸಮಯಕ್ಕೆ ಆದ್ಯತೆ, ಜೀವನದಲ್ಲಿ ನೈತಿಕತೆ ರೂಢಿಸಿಕೊಳ್ಳಬೇಕು ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಕಿವಿಮಾತು ಹೇಳಿದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ವಾತಾವರಣವಿದೆ. ಇನ್ನಷ್ಟು ಹೆಚ್ಚು ಮಾಡುವ ಕಾರ್ಯವಾಗಬೇಕು. ದುರ್ವಸ್ಯನಗಳಿಗೆ ತುತ್ತಾದವರನ್ನು ಪ್ರೀತಿಯಿಂದ ನೋಡಿ, ಮನಸ್ಸು ಪರಿವರ್ತನೆ ಮಾಡಬಹುದು. ದುಡಿಮೆಗೆ ಅವಕಾಶ, ನೀತಿವಂತರನ್ನಾಗಿ ಮಾಡುವುದು, ಮಧ್ಯಪಾನ, ಗುಟ್ಕಾ ನಿಷೇಧ ಮಾಡುವ ಗಟ್ಟಿ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡರೇ, ಸಮಾಜದ ಅವ್ಯವಸ್ಥೆ ಸುಧಾರಿಸಬಹುದು. ವ್ಯಕ್ತಿ ಬದಲಾವಣೆಯಾದರೆ, ಸಮಾಜ ಬದಲಾವಣೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಕಲೆಗೆ ಶಕ್ತಿಯಿದೆ. ಅಕ್ರಮ ಮದ್ಯ ಮಾರಾಟ ತಡೆ ಹಿಡಿದರೆ, ಹಳ್ಳಿಗಳ ಜೀವನ ಸುಧಾರಿಸುತ್ತದೆ. ಮೌಲ್ಯಾಧಾರಿತ ಸಂಸ್ಕಾರ ಎಲ್ಧಲರಿಗೂ ಬೇಕಾಗಿದೆ. ಮಕ್ಕಳಿಗೆ ಸಂಸ್ಕಾರ ಕಲಿಸುವ ಕಾರ್ಯ ಮನೆಯಲ್ಲಿ ಆಗಬೇಕು ಎಂದು ಹೇಳಿದರು.
ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ನಿರುದ್ಯೋಗ ಸಮಸ್ಯೆಯಿದೆ. ಎಲ್ಲರಿಗೂ ಶ್ವೇತ ವಸ್ತ್ರ ಉದ್ಯೋಗ ಬೇಕು, ಶ್ರಮ ಪಡುವುದು ಬೇಡಾಗಿದೆ. ಮೌಲ್ಯಾಧಾರಿತ ಶಿಕ್ಷಣದ ಪಾಲನೆಯಾಗಬೇಕು ಎಂದು ಹೇಳಿದರು.
ಹುಬ್ಬಳ್ಳಿ ಆಪ್ತ ಸಮಾಲೋಚಕ ಗುರುರಾಜ ಪಾಟೀಲ ‘ಮೌಲ್ಯಾಧಾರಿತ ಶಿಕ್ಷಣ’ ಕುರಿತು ಉಪನ್ಯಾಸ ನೀಡುತ್ತಾ, ಪ್ರಸ್ತುತ ಶಿಕ್ಷಣಕ್ಕೆ ಆದ್ಯತೆಯಿದೆ, ಆದರೆ ಮೌಲ್ಯ ಕುಸಿಯುತ್ತಿದೆ. ಪೋಷಕರು ಮಕ್ಕಳೊಂದಿಗೆ ಸಮಯ ಕಳೆಯಿರಿ. ಔಪಾಚಾರಿಕ ಶಿಕ್ಷಣ ಬದುಕು ಕೊಡುತ್ತದೆ, ಅನೌಪಚಾರಿಕ ಶಿಕ್ಷಣ ಅದೃಷ್ಟ ಕೊಡುತ್ತದೆ. ಇವೆರಡು ಶಿಕ್ಷಣದ ಅಗತ್ಯ ಮಕ್ಕಳಿಗಿದೆ. ಇದನ್ನು ಕೊಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಕೃಷ್ಣಮೂರ್ತಿ ಮೂಡಬಾಗಿಲು ರಚನೆಯ, ನಿರ್ದೇಶನದ ಕಳ್ಳರ ಸಂತೆ ನಾಟಕವನ್ನು ಶಿವಸಂಚಾರ–25 ತಂಡದವರು ಅಭಿನಯಿಸಿದರು.
ನಿವೃತ್ತ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ಧರಾಮಪ್ಪ, ಉದ್ಯಮಿ ಅಣಬೇರು ರಾಜಣ್ಣ, ದಾವಣಗೆರೆ ತಹಶೀಲ್ದಾರ್ ಅಶ್ವಥ್,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.