ADVERTISEMENT

ಶ್ರೀರಾಂಪುರ: ಸಂಕ್ರಾಂತಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 1:35 IST
Last Updated 17 ಜನವರಿ 2021, 1:35 IST
ಶ್ರೀರಾಂಪುರ ಹೊಬಳಿ ಎಸ್.ನೇರಲಕೆರೆ ಗ್ರಾಮದಲ್ಲಿ ಶನಿವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೊಲ ಬಿಡುವ ಕಾರ್ಯಕ್ರಮ ನೆರವೇರಿತು.
ಶ್ರೀರಾಂಪುರ ಹೊಬಳಿ ಎಸ್.ನೇರಲಕೆರೆ ಗ್ರಾಮದಲ್ಲಿ ಶನಿವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೊಲ ಬಿಡುವ ಕಾರ್ಯಕ್ರಮ ನೆರವೇರಿತು.   

ಶ್ರೀರಾಂಪುರ: ಹೋಬಳಿಯ ಎಸ್. ನೇರಲಕೆರೆ ಗ್ರಾಮಸ್ಥರು ಶನಿವಾರ ಕಾಡಿನಲ್ಲಿ ಜೀವಂತ ಮೊಲ ಹಿಡಿದು ತಂದು ದೇವರಿಗೆ ಹಾಗೂ ಮೊಲಕ್ಕೆ ಪೂಜೆ ಸಲ್ಲಿಸುವ ಮೂಲಕ ಮೊಲವನ್ನು ಬೀಳ್ಕೊಟ್ಟು ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.

ಮೊದಲಿನಿಂದಲೂ ಗ್ರಾಮದಲ್ಲಿ ಮಕರ ಸಂಕ್ರಮಣದ ಮಾರನೆ ದಿನ ಸಂಕ್ರಾಂತಿ ಹಬ್ಬವನ್ನು ಆಚರಿಸುವುದು ರೂಢಿ. ಅದರಂತೆ ಶುಕ್ರವಾರ ಮೊಲ ಬಿಡುವ ಕಾರ್ಯಕ್ರಮವಿತ್ತು. ಆದರೆ ದಿನವಿಡೀ ಬೇಟೆ ಆಡಿದರೂ ಮೊಲ ಸಿಗದ ಕಾರಣ ದೇವರಿಗೆ ಪೂಜೆಯನ್ನೂ ಮಾಡದೆ ಸಂಕ್ರಾಂತಿ ಹಬ್ಬನ್ನು ಮುಂದೂಡಲಾಗಿತ್ತು.

ಶನಿವಾರ ಮಧ್ಯಾಹ್ನ 12ಕ್ಕೆ ಮೊಲ ಸಿಕ್ಕ ನಂತರ ಅದಕ್ಕೆ ಸ್ವಲ್ಪವೂ ಪೆಟ್ಟಾಗದಂತೆ ಪುಟ್ಟಿಯಲ್ಲಿ ಹಾಕಿಕೊಂಡು ಬಂದು ಅದಕ್ಕೆ ಸ್ನಾನ ಮಾಡಿಸಿ ನಾಮಧಾರಣೆ ಹಾಗೂ ಹೂಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಬಳಿಕ ಕಟ್ಟೆ ರಂಗನಾಥಸ್ವಾಮಿ ದೇವರ ಮುಂದೆ ಮೂರು ಬಾರಿ ಸುತ್ತು ಹಾಕಿಸಿ ವಾದ್ಯ ಸಮೇತ ಸಕಲ ಬಿರುದಾವಳಿಗಳೊಂದಿಗೆ ಮೊಲವನ್ನು ಬೀಳ್ಕೊಡಲಾಯಿತು. ಬಳಿಕ ಹಬ್ಬದ ಸಂಭ್ರಮ ಕಳೆಗಟ್ಟಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.