ಸಿರಿಗೆರೆ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಗ್ರಾಮೀಣರಲ್ಲಿ ಆರೋಗ್ಯ, ನೈರ್ಮಲ್ಯ ಇನ್ನಿತರ ವಿಷಯಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಮಂಜುನಾಥ್ ತಿಳಿಸಿದರು.
ಸಮೀಪದ ಕೋಗುಂಡೆ ಗ್ರಾಮದಲ್ಲಿ ಭರಮಸಾಗರದ ಸರ್ಕಾರಿ ಪದವಿ ಕಾಲೇಜು ವತಿಯಿಂದ ಆಯೋಜಿಸಿರುವ 6 ದಿನಗಳ ವಾರ್ಷಿಕ ಸೇವಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಹಂತದಲ್ಲಿಯೇ ಮಕ್ಕಳಲ್ಲಿ ಸೇವಾ ಮನೋಭಾವ ಮೂಡಿಸುವ ಗುರಿ ಎನ್‌ಎಸ್‌ಎಸ್ ಹೊಂದಿದೆ. ಅದರ ತತ್ವ ಆಶಯಗಳನ್ನು ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಹೇಳಿದರು.
ವಾರ್ಷಿಕ ಸೇವಾ ಶಿಬಿರಗಳು ಕಾಲೇಜು ಹಂತದಲ್ಲಿ ಓದುತ್ತಿರುವ ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಎಸ್. ಶಶಿಕಲಾ ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಕೆ.ಜಿ.ವಿರೂಪಾಕ್ಷಪ್ಪ, ಪಿ.ಎಸ್.ರವೀಂದ್ರ, ಜಿ.ಎಚ್.ಶ್ರೀಶೈಲ, ದೇವೇಂದ್ರಪ್ಪ, ಎಚ್.ಎಂ.ಬಸವರಾಜ, ಶಿಲ್ಪಾ ಮೋಹನ್‌ದಾಸ್ ಪಾಲ್ಗೊಂಡಿದ್ದರು.
ಎನ್‌ಎಸ್‌ಎಸ್ ಘಟಕ 1ರ ಸಂಯೋಜಕ ಎಸ್. ಚಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಆರ್. ಮಮತಾ ಕಾರ್ಯಕ್ರಮ ನಿರ್ವಹಿಸಿದರು. ಘಟಕ 2ರ ಸಂಯೋಜಕ ಕೆ.ಎಸ್.ಚಂದ್ರಶೇಖರ ಸ್ವಾಗತಿಸಿದರು. ಪಿ.ಹರೀಶ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.