ಸಿರಿಗೆರೆ: ಬೆಂಗಳೂರಿನ ಸದಾಶಿವನಗರದಲ್ಲಿರುವ ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಮನೆಗೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಾನುವಾರ ಭೇಟಿ ನೀಡಿದ್ದರು.
ಸಚಿವ ಮಲ್ಲಿಕಾರ್ಜುನ್, ಸಹೋದರಿ ಹಾಗೂ ಕುಟುಂಬದ ಸದಸ್ಯರು ಶ್ರೀಗಳನ್ನು ಬರಮಾಡಿಕೊಂಡು ಫಲ, ಪುಷ್ಪ ನೀಡಿ ಗೌರವಿಸಿದರು. ‘ಮನೆಗೆ ಭೇಟಿ ನೀಡುವಂತೆ ಶ್ರೀಗಳಲ್ಲಿ ಹಲವು ಬಾರಿ ವಿನಂತಿಸಿದ್ದೆ. ಈಗ ಅವರು ಆಗಮಿಸಿ ನಮಗೆ ಆಶೀರ್ವಾದ ನೀಡಿದ್ದಾರೆ’ ಎಂದು ಮಲ್ಲಿಕಾರ್ಜುನ್ ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.