ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿಯ ಸಣ್ಣಕಿಟ್ಟದಹಳ್ಳಿ ಗ್ರಾಮದ ಹೊರವಲಯದ ನಿಂಗಪ್ಪನ ಗುಡ್ಡದಲ್ಲಿರುವ ಈಶ್ವರಸ್ವಾಮಿ ದೇವಸ್ಥಾನದಲ್ಲಿ ನಿಧಿ ಆಸೆಗಾಗಿ ದುಷ್ಕರ್ಮಿಗಳು ಶಿವಲಿಂಗವನ್ನೇ ಕಿತ್ತೊಗೆದಿರುವ ಘಟನೆ ಶುಕ್ರವಾರ ಬೆಳಿಗ್ಗೆ ಗೊತ್ತಾಗಿದೆ.
ನಿಂಗಪ್ಪನ ಗುಡ್ಡದಲ್ಲಿರುವ ಈಶ್ವರ ಸ್ವಾಮಿ ಸುತ್ತಮುತ್ತಲ ಗ್ರಾಮಗಳ ಭಕ್ತರ ಆರಾಧ್ಯ ದೈವವಾಗಿದ್ದು, ವಿಶೇಷ ದಿನಗಳಲ್ಲಿ ದೇವಾಲಯದಲ್ಲಿ ಭಕ್ತರಿಂದ ಪೂಜಾ ಕಾರ್ಯಗಳು, ಅನ್ನಸಂತರ್ಪಣೆ ನಡೆಯುತ್ತದೆ.
ಕಿಡಿಗೇಡಿಗಳು ನಿಧಿ ಆಸೆಗಾಗಿ ದೇವಾಲಯದ ಬಾಗಿಲು ತೆರೆದು ಗರ್ಭಗುಡಿಯಲ್ಲಿದ್ದ ಬಸವಣ್ಣ ದೇವರ ಪ್ರತಿಮೆ, ಈಶ್ವರಸ್ವಾಮಿಯ ಶಿವಲಿಂಗವನ್ನು ಕಿತ್ತು ಪಕ್ಕಕ್ಕೆ ಸರಿಸಿ, 3-4 ಅಡಿ ಗುಂಡಿ ತೆಗೆದಿದ್ದಾರೆ. ಬೆಳಿಗ್ಗೆ ಅರ್ಚಕರು ದೇವಾಲಯದ ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.