ADVERTISEMENT

ಹಿರಿಯೂರು: ಆರು ತಿಂಗಳಿಂದ ಬಾಗಿಲು ಮುಚ್ಚಿರುವ ಎಟಿಎಂ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 13:15 IST
Last Updated 11 ಸೆಪ್ಟೆಂಬರ್ 2024, 13:15 IST
ಹಿರಿಯೂರಿನ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಧಾನ ಶಾಖೆಯ ಮುಖ್ಯದ್ವಾರದಲ್ಲಿರುವ ಎಟಿಎಂ ಮುಚ್ಚಿರುವುದು
ಹಿರಿಯೂರಿನ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಧಾನ ಶಾಖೆಯ ಮುಖ್ಯದ್ವಾರದಲ್ಲಿರುವ ಎಟಿಎಂ ಮುಚ್ಚಿರುವುದು   

ಹಿರಿಯೂರು: ಇಲ್ಲಿನ ತಾಲ್ಲೂಕು ಕಚೇರಿ ಆವರಣಕ್ಕೆ ಹೊಂದಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ದ್ವಾರದಲ್ಲಿರುವ ಎಟಿಎಂ ಮುಚ್ಚಿದ್ದು, ಗ್ರಾಹಕರು ತೊಂದರೆ ಎದುರಿಸುವಂತಾಗಿದೆ.

ಆರು ತಿಂಗಳಿಂದ ಎಟಿಎಂ ಬಾಗಿಲು ಬಂದ್‌ ಆಗಿದೆ. ತಾಲ್ಲೂಕು ಕಚೇರಿ, ಉಪನೋಂದಣಾಧಿಕಾರಿ ಕಚೇರಿಗೆ ಬರುವ ನೂರಾರು ಗ್ರಾಹಕರಿಗೆ ಹತ್ತಿರದಲ್ಲಿರುವುದು ಇದೊಂದೇ ಎಟಿಎಂ. ಎಟಿಎಂ ಬಂದ್‌ ಆಗಿರುವುದರಿಂದ ನಿತ್ಯ ಈ ಕಚೇರಿಗೆ ಬರುವ ಜನರು ಅಗತ್ಯ ಸಂದರ್ಭದಲ್ಲಿ ಹಣ ಪಡೆಯಲು ತೊಂದರೆಯಾಗಿದೆ. ಬ್ಯಾಂಕ್ ಅಧಿಕಾರಿಗಳು ತಕ್ಷಣ ಎಟಿಎಂ ಬಾಗಿಲು ತೆರೆದು ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು.

–ಎಂ.ಎಲ್. ಗಿರಿಧರ್, ಮಲ್ಲಪ್ಪನಹಳ್ಳಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.