ADVERTISEMENT

ಸಿಡಿಲು ಬಡಿದು ಹಸುಗಳು ಸಾವು

​ಪ್ರಜಾವಾಣಿ ವಾರ್ತೆ
Published 19 ಮೇ 2022, 2:56 IST
Last Updated 19 ಮೇ 2022, 2:56 IST
ತಳಕು ಹೋಬಳಿಯ ಲಂಬಾಣಿಹಟ್ಟಿ ಗ್ರಾಮದಲ್ಲಿ ಮರದ ಕೆಳಗೆಡೆ ಇದ್ದ ಎರಡು ಹಸುಗಳು ಸಿಡಿದು ಬಡಿದು ಮೃತಪಟ್ಟಿವೆ.
ತಳಕು ಹೋಬಳಿಯ ಲಂಬಾಣಿಹಟ್ಟಿ ಗ್ರಾಮದಲ್ಲಿ ಮರದ ಕೆಳಗೆಡೆ ಇದ್ದ ಎರಡು ಹಸುಗಳು ಸಿಡಿದು ಬಡಿದು ಮೃತಪಟ್ಟಿವೆ.   

ನಾಯಕನಹಟ್ಟಿ: ತಳಕು ಹೋಬಳಿಯ ಲಂಬಾಣಿಹಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟಿವೆ.

ತಳಕು ಗ್ರಾಮದ ಸಮೀಪದ ಲಂಬಾಣಿಹಟ್ಟಿ ಸರ್ವೆ ನಂ–139ರಲ್ಲಿರುವ ಹೊಲದಲ್ಲಿನ ಗುಡಿಸಲಿನಲ್ಲಿ ರೈತ ಮಹಿಳೆ ಗೌರಿಬಾಯಿ ಹಾಗೂ ಅವರ ಪುತ್ರ ವಾಸವಾಗಿದ್ದರು. ದಿನವಿಡೀ ಹಸುಗಳನ್ನು ಮೇಯಿಸಿ ಸಂಜೆ ಹೊಲದಲ್ಲಿರುವ ಹುಣಸೇ ಮರದ ಕೆಳಗೆ ಕಟ್ಟಿದ್ದರು. ರಾತ್ರಿ ಸಿಡಿಲು ಬಡಿದಿದೆ.

ಸಿಡಿಲಿನ ರಭಸಕ್ಕೆ ಹುಣಸೆ ಮರ ಸುಟ್ಟಿದೆ.

ADVERTISEMENT

ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಗೌರಿಬಾಯಿ ತಮ್ಮ ಹಸುಗಳು ಮೃತಪಟ್ಟಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಳಕು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.