ಕಂಚೀಪುರ (ಹೊಸದುರ್ಗ): ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಬುಧವಾರ ಯುಗಾದಿ ನೀರೆರೆಚಾಟ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ 9ಕ್ಕೆ ಸೂರ್ಯನ ಎಳೆಬಿಸಿಲು ಆರಂಭವಾಗುತ್ತಿದಂತೆ ಯುವಕ-ಯುವತಿಯರು ಬಿಂದಿಗೆ ಹಿಡಿದು ಗ್ರಾಮದ ಬೀದಿಯಲ್ಲಿದ್ದ ಕೈಪಂಪು (ಜಗ್ಗ ಬೋರ್) ಬಳಿ ಬಂದಿದ್ದರು. ಮಕ್ಕಳು, ಹಿರಿಯರು, ಕಿರಿಯರು ಎಂಬ ಭೇದಭಾವ ಮರೆತು ನೀರೆರೆಚಿ ಸಂಭ್ರಮಿಸಿದರು.
ಮೈಮೇಲೆ ನೀರು ಹಾಕಿಸಿಕೊಳ್ಳಲು ಇಷ್ಟವಿಲ್ಲದ ಕೆಲವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬೆನ್ನಟ್ಟಿಕೊಂಡು ಓಡಿಹೋಗಿ ನೀರು ನೀರೆರೆಚಿದರು. ಕೆಲವರು ಬಣ್ಣ ಹಚ್ಚಿಕೊಂಡು ಆಟದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.