ADVERTISEMENT

ಮೌಢ್ಯಕ್ಕೆ ಬಸವಾದಿ ಶರಣರಿಂದ ತಿಲಾಂಜಲಿ: ಸಾಹಿತಿ ಬಸವರಾಜಪ್ಪ ಹೇಳಿಕೆ

ನುಲಿಯ ಚಂದಯ್ಯ ಜಯಂತಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 4:06 IST
Last Updated 13 ಆಗಸ್ಟ್ 2022, 4:06 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿಯನ್ನು ಡಾ.ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು. ಸಾಹಿತಿ ಜಿ.ಎನ್‌.ಬಸವರಾಜಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಇದ್ದಾರೆ.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿಯನ್ನು ಡಾ.ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು. ಸಾಹಿತಿ ಜಿ.ಎನ್‌.ಬಸವರಾಜಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಇದ್ದಾರೆ.   

ಚಿತ್ರದುರ್ಗ: ಜೀವನ ನಿರ್ವಹಣೆ ಮಾಡುವುದು ಕಾಯಕವಲ್ಲ. ಕಾಯಕ ಅಂದರೆ ಅಮೂಲ್ಯವಾದ ಮೌಲ್ಯ ಎಂದು ಸಾಹಿತಿ ಜಿ.ಎನ್‌. ಬಸವರಾಜಪ್ಪ ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು.

‘ಕಾಯಕಯೋಗಿ ನುಲಿಯ ಚಂದಯ್ಯ ಅವರ ಅನುಭಾವ ನಮ್ಮೆಲ್ಲರಿಗೆ ಅಗತ್ಯವಾಗಿದೆ. ಧಾರ್ಮಿಕ ಹಿನ್ನಲೆಯಲ್ಲಿ ಮಾಡುವ ಕಸುಬುಗಳಿಗೆ ಜಗತ್ತಿನ ಇತಿಹಾಸದಲ್ಲಿಯೇ ಯಾರು ಕೊಡದೇ ಇರುವ ಒಂದು ಘನತೆ, ಮರ್ಯಾದೆ ಹಾಗೂ ಮೌಲ್ಯವನ್ನು 12ನೇ ಶತಮಾನದ ಬಸವಾದಿ ಶರಣರು ನೀಡಿದ್ದಾರೆ.ದೇಶ ಮೂಢನಂಬಿಕೆಯ ತವರೂರು. ಮೌಢ್ಯಗಳನ್ನು ಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆಸಿಕೊಂಡ ದೇಶ. ಇವೆಲ್ಲಕ್ಕೂ ತಿಲಾಂಜಲಿ ಹಾಕುವಲ್ಲಿ ಬಸವಾದಿ ಪ್ರಮುಖರು ಶ್ರಮಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ನುಲಿಯ ಚಂದಯ್ಯ ಅವರ ಜಯಂತಿಯನ್ನು ರಾಜ್ಯ ಸರ್ಕಾರದಿಂದ ಮೊದಲ ಬಾರಿಗೆ ಆಚರಿಸಲಾಗುತ್ತಿದೆ. ಇದು ಚಂದಯ್ಯ ಅವರಿಗೆ ಸಲ್ಲುವ ದೊಡ್ಡ ಗೌರವವಾಗಿದೆ’ ಎಂದುಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರುಹೇಳಿದರು.

‘ಕಾಯಕ ಬದುಕಿಗೆ ಒಂದು ಮಾರ್ಗ ಹಾಗೂ ಆಧಾರವೂ ಹೌದು. ಕಾಯಕ ತತ್ವ ಸರ್ವಶ್ರೇಷ್ಟವಾದ ತತ್ವವಾಗಿದೆ. ನುಲಿಯ ಚಂದಯ್ಯ ಅವರು ಕಾಯಕ ತತ್ವಕ್ಕೆ ಭಾಷ್ಯ ಬರೆದ ಅದ್ಭುತ ಶರಣರು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ಕೊರಚ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್‌.ಧನಂಜಯ, ಕೊರಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್‌, ಗೌರವ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ರಾಮಣ್ಣ, ಖಜಾಂಚಿ ಅಂಜಿನಮೂರ್ತಿ, ಸಹ ಕಾರ್ಯದರ್ಶಿ ಪರಮೇಶ್‌, ನಿರ್ದೇಶಕ ನರಸಿಂಹಮೂರ್ತಿ ಇದ್ದರು.

ನುಲಿಯ ಚಂದಯ್ಯ ಬಸವಣ್ಣನವರ ಸಮಕಾಲೀನರು. ಅವರ ಜೊತೆ ಕೈಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರು. ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದರು.

–ಇ.ಬಾಲಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.