ADVERTISEMENT

ಹೊಸದುರ್ಗ: ಲಸಿಕೆ ಪಡೆಯಲು ತಪ್ಪದ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 3:33 IST
Last Updated 20 ಏಪ್ರಿಲ್ 2021, 3:33 IST

ಹೊಸದುರ್ಗ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಜನರ ಪರದಾಟ ಇನ್ನೂ ತಪ್ಪಿಲ್ಲ.

ಕಳೆದ 12ರಂದು ಖಾಲಿಯಾಗಿದ್ದ ಲಸಿಕೆಯು 15ರವರೆಗೂ ಬಂದಿರಲಿಲ್ಲ. ಇದರಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಬಂದ ನೂರಾರು ಜನ ಮೂರು ದಿನಗಳ ಕಾಲ ಲಸಿಕೆಗಾಗಿ ಆಸ್ಪತ್ರೆಗೆ ಅಲೆದಾಡಿದ್ದರು.

16ರಂದು ಜಿಲ್ಲಾ ಆಸ್ಪತ್ರೆಯಿಂದ ಕಳುಹಿಸಿದ್ದ ಲಸಿಕೆ ಎರಡೇ ದಿನಕ್ಕೆ ಮತ್ತೆ ಖಾಲಿಯಾಗಿದೆ ಎನ್ನಲಾಗಿದೆ. ಸಂತೆ ದಿನವಾದ ಸೋಮವಾರ ಲಸಿಕೆ ಹಾಕಿಸಿಕೊಳ್ಳಲು ನೂರಾರು ಜನರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ
ಲಸಿಕೆ ಕೇಂದ್ರದ ಬಳಿಗೆ ಬಂದಿದ್ದರು.

ADVERTISEMENT

ಲಸಿಕೆ ಖಾಲಿಯಾಗಿದ್ದು ಮತ್ತೆ ಬಂದಿಲ್ಲ ಎಂಬ ಸುದ್ದಿ ತಿಳಿಯುತ್ತಿದಂತೆ ಬೇಸರದಿಂದ ತಮ್ಮ ಮನೆಗಳತ್ತ ಮರಳಿದರು. ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಇಂತಹ ಸಂದರ್ಭದಲ್ಲಿ ತಾಲ್ಲೂಕಿನ ಜನರಿಗೆ ಸಾಕಾಗುವಷ್ಟು ಲಸಿಕೆ ದಾಸ್ತಾನು ಮಾಡಿಕೊಳ್ಳಲು ಆರೋಗ್ಯ ಇಲಾಖೆ ಕಾಳಜಿ ವಹಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.