
ಹೊಳಲ್ಕೆರೆ: ಕೆಲವರು ನಾಯಕ ಸದಾಯವನ್ನು ತುಳಿಯಲು ಕುತಂತ್ರ ನಡೆಸುತ್ತಿದ್ದಾರೆ. ಅಂತವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ವಾಲ್ಮೀಕಿ ನಾಯಕ ಸಮುದಾಯ, ಮದಕರಿ ನಾಯಕ ಯುವಸೇನಾ ಸಮಿತಿ ಹಾಗೂ ಏಕಲವ್ಯ ಹೋರಾಟ ಸಮಿತಿಯ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಮೂಲಕ ದೊಡ್ಡ ಹುದ್ದೆಗಳನ್ನು ಪಡೆಯಬೇಕು. ಯುವಕ, ಯುವತಿಯರು ವಿದ್ಯಾವಂತರಾದರೆ ಮಾತ್ರ ಸಮಾಜ ಉದ್ದಾರವಾಗುತ್ತದೆ. ದ್ರೋಣಾಚಾರ್ಯರು ಕುತಂತ್ರದಿಂದ ಏಕಲವ್ಯನಿಂದ ಗುರುದಕ್ಷಿಣೆಯಾಗಿ ಹೆಬ್ಬೆರಳನ್ನು ತೆಗೆದುಕೊಂಡರು. ಹಿಂದಿನಿಂದಲೂ ನಾಯಕ ಸಮುದಾಯ ತುಳಿತಕ್ಕೆ ಒಳಗಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲೋಹಿತ್ ಕುಮಾರ್, ಎಸ್.ಜೆ. ರಂಗಸ್ವಾಮಿ. ವಾಲ್ಮೀಕಿ ನಾಯಕ ಸಮುದಾಯದ ಅಧ್ಯಕ್ಷ ಸೂರೇಗೌಡ, ಮದಕರಿ ನಾಯಕ ಯುವ ಸೇನಾ ಸಮಿತಿ ಅಧ್ಯಕ್ಷ ರಾಜಣ್ಣ ಹಿರೇಕಂದವಾಡಿ, ಬಿ.ಟಿ. ಬಸವರಾಜ್, ಎಸ್.ಆರ್. ಅಜ್ಜಯ್ಯ ಶಿವಪುರ, ಹೋರಕೆರಪ್ಪ, ಗೌರಿ ರಾಜಕುಮಾರ, ಸಂಗನಗುಂಡಿ ಮಂಜುನಾಥ್, ಆರ್.ಎ. ಅಶೋಕ್, ರಂಗಸ್ವಾಮಿ, ಅಶೋಕ್, ದೊರೆ ಮಲ್ಲಿಕಾರ್ಜುನ್, ಪವನ್ ಕುಮಾರ್, ರಮೇಶ್, ಮಂಜುನಾಥ್, ರಂಗಸ್ವಾಮಿ, ಗೋವಿಂದಪ್ಪ, ಪರಮೇಶ್ವರಪ್ಪ, ಮೂಡಲ ಗಿರಿಯಪ್ಪ, ಪ್ರಹ್ಲಾದ್, ರೆಡ್ಡಿ ನಾಗಪ್ಪ, ಮಂಜುನಾಥ್, ತಿಪ್ಪೇಸ್ವಾಮಿ, ದಿಲೀಪ್ ಕುಮಾರ್, ಗುರುಸ್ವಾಮಿ, ಮಾರುತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.