ADVERTISEMENT

ಹೊಳಲ್ಕೆರೆ| ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿದ ಯುವಕರು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:38 IST
Last Updated 9 ಡಿಸೆಂಬರ್ 2025, 5:38 IST
ಹೊಳಲ್ಕೆರೆ ತಾಲ್ಲೂಕಿನ ನಂದನ ಹೊಸೂರು ಸರ್ಕಾರಿ ಶಾಲೆಗೆ ಕುಡಿಯುವ ನೀರು ಒದಗಿಸಲು ಪೈಪ್ ಲೈನ್ ಕಾಮಗಾರಿ ನಡೆಸುತ್ತಿರುವ ದೃಶ್ಯ.
ಹೊಳಲ್ಕೆರೆ ತಾಲ್ಲೂಕಿನ ನಂದನ ಹೊಸೂರು ಸರ್ಕಾರಿ ಶಾಲೆಗೆ ಕುಡಿಯುವ ನೀರು ಒದಗಿಸಲು ಪೈಪ್ ಲೈನ್ ಕಾಮಗಾರಿ ನಡೆಸುತ್ತಿರುವ ದೃಶ್ಯ.   

ಹೊಳಲ್ಕೆರೆ: ಯುವಕರು ಪಾರ್ಟಿ, ಪ್ರವಾಸಗಳಿಗೆ ಹೆಚ್ಚು ಮಹತ್ವ ಕೊಡುವುದು ಸಾಮಾನ್ಯ. ಆದರೆ, ಇಲ್ಲೊಂದು ಗ್ರಾಮದ ಯುವಕರು ಸರ್ಕಾರಿ ಶಾಲೆಗೆ ತಮ್ಮ ಸ್ವಂತ ಹಣದಲ್ಲಿ ಪೈಪ್‌ಲೈನ್ ಅಳವಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ನಂದನ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರಿಯಾದ ಪೈಪ್ ಲೈನ್ ಇರಲಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಶೌಚಾಲಯಕ್ಕೆ ಬಳಸಲು, ಅಡಿಗೆ ಸಾಮಗ್ರಿ ತೊಳೆಯಲು, ಬಿಸಿಯೂಟ ತಯಾರಿಸಲು, ತಟ್ಟೆ, ಲೋಟ, ಕೈ ತೊಳೆಯಲು ಸಮಸ್ಯೆ ಉಂಟಾಗಿತ್ತು. ಇದನ್ನು ಗಮನಿಸಿದ ಎಂಟತ್ತು ಯುವಕರು ತಮ್ಮದೇ ಹಣ ಹಾಕಿಕೊಂಡು ಗ್ರಾಮದ ಓವರ್ ಹೆಡ್ ಟ್ಯಾಂಕ್ ನಿಂದ ಶಾಲೆಯವರೆಗೆ ಪೈಪ್ ಲೈನ್ ಅಳವಡಿಸಿದ್ದಾರೆ.

‘ಓವರ್ ಹೆಡ್ ಟ್ಯಾಂಕ್ ನಿಂದ ಶಾಲೆಯವರಿಗೆ ಸುಮಾರು 300 ಮೀಟರ್ ದೂರವಿದೆ. ಒಂದೂಕಾಲು ಇಂಚಿನ 35 ಲೈಪ್ ಖರೀದಿಸಿದ್ದು, ಜೆಸಿಬಿಯಿಂದ ಗುಂಡಿ ತೆಗೆಸಿ ಹೂಳಿಸಿದ್ದೇವೆ. ಶಾಲೆಯ ಸಂಪಿಗೆ ಸಂಪರ್ಕ ಕಲ್ಪಿಸಿದ್ದು, ಈಗ ಸಾಕಷ್ಟು ನೀರು ಬರುತ್ತಿದೆ. ನೀರಿನ ತೊಟ್ಟಿ ಹಾಗೂ ಶೌಚಾಲಯಕ್ಕೂ ನೀರು ಬಳಕೆಯಾಗುತ್ತಿದೆ. ನಮಗೆ ಪೈಪ್ ಲೈನ್ ಮಾಡಿಕೊಡಿ ಎಂದು ಯಾರೂ ಕೇಳಿಲ್ಲ. ನಾವೇ ಸಮಸ್ಯೆ ಅರಿತು ಕೆಲಸ ಮಾಡಿದ್ದೇವೆ. ಇದಕ್ಕೆ ಸುಮಾರು ₹25,000 ಖರ್ಚಾಗಿದೆ ಎಂದು’ ಗ್ರಾಮದ ಯುವಕ ನವೀನ್ ಹೇಳಿದರು.

ADVERTISEMENT

‘ಗ್ರಾಮದ ಲಿಂಗಾರೆಡ್ಡಿ , ರಂಗಸ್ವಾಮಿ, ಹರೀಶ್, ಗಿರೀಶ್, ಜ್ಯೋತಿ, ಮೋಹನ್ ಹಾಗೂ ಗೆಳೆಯರ ಸಹಕಾರದಿಂದ ಶಾಲೆಗೆ ಶಾಶ್ವತ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಯಿತು. ಹಣವನ್ನು ಸುಮ್ಮನೆ ವ್ಯರ್ಥ ಮಾಡುವ ಬದಲು ಇಂತಹ ಸತ್ಕಾರ್ಯಗಳಿಗೆ ಬಳಸಿದರೆ ಎಲ್ಲರಿಗೂ ಉಪಯೋಗ ಆಗುತ್ತದೆ’ ಎಂದು ಅವರು ತಿಳಿಸಿದರು.

ಶಾಲೆಯಲ್ಲಿ ನೀರಿನ ಸಮಸ್ಯೆ ಇತ್ತು. ಗ್ರಾಮದ ಯುವಕರು ಸ್ವಪ್ರೇರಣೆಯಿಂದ ಪೈಪ್ ಲೈನ್ ಅಳವಡಿಸಿ ಕೊಟ್ಟಿದ್ದಾರೆ.
ಲತಾ, ಮುಖ್ಯಶಿಕ್ಷಕಿ
ಹೊಳಲ್ಕೆರೆ ತಾಲ್ಲೂಕಿನ ನಂದನ ಹೊಸೂರು ಸರ್ಕಾರಿ ಶಾಲೆಗೆ ಕುಡಿಯುವ ನೀರು ಒದಗಿಸಲು ಪೈಪ್ ಲೈನ್ ಕಾಮಗಾರಿ ನಡೆಸುತ್ತಿರುವ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.