ADVERTISEMENT

ಅನುತ್ತೀರ್ಣಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2017, 13:13 IST
Last Updated 2 ಜೂನ್ 2017, 13:13 IST
ಸುಚೇತನಾ
ಸುಚೇತನಾ   

ಮಂಗಳೂರು: ಎಂಜಿನಿಯರಿಂಗ್‌ ಪ್ರಥಮ ವರ್ಷದ ಪ್ರಥಮ ಸೆಮಿಸ್ಟರ್‌ನ ಫಲಿತಾಂಶದಲ್ಲಿ ಅನುತ್ತೀರ್ಣಗೊಂಡಿರುವುದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು ಗುರುವಾರ ಇಲ್ಲಿಗೆ ಸಮೀಪದ ವಳಚ್ಚಿಲ್‌ನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ವಸತಿ ನಿಲಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಅಂಗವಳ್ಳಿ ಅಗಲ ಗ್ರಾಮದ ಸುಚೇತನಾ (19) ಆತ್ಮಹತ್ಯೆ ಮಾಡಿ ಕೊಂಡವರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ ಎಂಜಿನಿಯರಿಂಗ್ ವಿಭಾಗದ ಪ್ರಥಮ ವರ್ಷದ ಫಲಿತಾಂಶ ಪ್ರಕಟವಾಗಿದ್ದು, ಗುರುವಾರ ಬೆಳಿಗ್ಗೆಯಷ್ಟೇ ಊರಿನಿಂದ ವಳಚ್ಚಿಲ್‌ಗೆ ಬಂದ ಅವರು, ಕಾಲೇಜಿಗೆ ತೆರಳಿ ಫಲಿತಾಂಶ ನೋಡಿದ್ದರು. ಆದರೆ ರಸಾಯನ ವಿಜ್ಞಾನದಲ್ಲಿ ಅನುತ್ತೀರ್ಣ ಗೊಂಡ ವಿಷಯ ಗೊತ್ತಾಗುತ್ತಿದ್ದಂತೆಯೇ, ವಸತಿ ನಿಲಯದ ತಮ್ಮ ಕೊಠಡಿಗೆ ತೆರಳಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ತರಗತಿಯಲ್ಲಿ ಎಲ್ಲರೂ ಪಾಸಗಿದ್ದು, ನಾನು ಮಾತ್ರ ಫೇಲ್‌ ಆಗಿರುವುದಕ್ಕೆ ಬೇಸರವಾಗಿದೆ. ತಂದೆ ತಾಯಿಯ ಆಸೆ ಪೂರೈಸಲು ಆಗಲಿಲ್ಲ ಎಂಬ ಬೇಸರವಿದೆ’ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT