ADVERTISEMENT

ಅಭಿವೃದ್ಧಿಗೆ ಜನತೆಯ ಸಹಭಾಗಿತ್ವ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 7:55 IST
Last Updated 11 ಜೂನ್ 2012, 7:55 IST

ಪುತ್ತೂರು: ಜನತೆಯ ಸಹಕಾರ ಮತ್ತು ಸಹಭಾಗಿತ್ವವಿದ್ದಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದು ಪುರಸಭಾಧ್ಯಕ್ಷೆ ಕಮಲಾ ಆನಂದ್ ಹೇಳಿದರು.

ಪುತ್ತೂರು ಪುರಸಭಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ ನೈತಾಡಿ ವ್ಯಾಪ್ತಿಯಲ್ಲಿ ಪುರಸಭಾ ವತಿಯಿಂದ ಅಳವಡಿಸಲಾದ ದಾರಿ ದೀಪ ವ್ಯವಸ್ಥೆಯನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯ ಸದಸ್ಯರಾದ ಪುರಸಭಾ ವಿಪಕ್ಷ ನಾಯಕ ಎಚ್, ಮಹಮ್ಮದ್ ಆಲಿ ಅವರು ಮಾತನಾಡಿ ಕೆಮ್ಮಿಂಜೆ ವಾರ್ಡಿನಲ್ಲಿ ಪುರಸಭಾ ವತಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು , ಸದಸ್ಯರಾದ ಲ್ಯಾನ್ಸಿ ಮಸ್ಕರೇನ್ಹಸ್ , ಉಷಾ ಬಾಲಕೃಷ್ಣ , ಅನ್ವರ್ ಖಾಸಿಂ , ಮುಖ್ಯಾಧಿಕಾರಿ ಸುಧಾಕರ್, ಸ್ಥಳಿಯ ಪ್ರಮುಖರಾದ ವಿಶ್ವನಾಥ ಟೈಲರ್ , ಜಾನ್ ಪಿರೇರಾ, ದಿಲೀಪ್ ಕುಮಾರ್ , ಅಬ್ದುಲ್ ಕುಂಞಿ , ಚೇತನ್, ರಫೀಕ್ ಮೊಟ್ಟೆತ್ತಡ್ಕ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.