ಪುತ್ತೂರು: ಕಾಂಗ್ರೆಸ್ ಪಾಲಿನ ಭದ್ರ ಕೋಟೆಯಾಗಿದ್ದರೂ, ಹಿಂದಿನ ಚುನಾ ವಣೆಯಲ್ಲಿ ಬಿಜೆಪಿ ಕೈವಶವಾಗಿದ್ದ ತಾಲ್ಲೂ ಕಿನ ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾ ಯಿತಿ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಅನುಷ್ಠಾನಗೊಂಡಿವೆ. ಆದರೂ ಗಡಿ ಪ್ರದೇಶದಲ್ಲಿ ಸಂಪರ್ಕ ರಸ್ತೆಗಳು ತೀರಾ ಶೋಚನೀಯ ಸ್ಥಿತಿಯಲ್ಲಿವೆ.
ಈ ಕ್ಷೇತ್ರವು ಕೆದಂಬಾಡಿ, ಕೆಯ್ಯೂ ರು, ಅರಿಯಡ್ಕ, ಮಾಡ್ನೂರು, ಪಡುವ ನ್ನೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು ಮತ್ತು ಕೊಳ್ತಿಗೆ ಗ್ರಾಮಗಳ ನ್ನೊಳಗೊಂಡಿದ್ದು, ಈ ಕ್ಷೇತ್ರ ವ್ಯಾಪ್ತಿ ಯಲ್ಲಿ ಬರುವ ಪಡುಮಲೆ ತುಳುನಾಡಿನ ವೀರಪುರುಷರೆಂಬ ಐತಿಹಾಸಿಕ ಹಿನ್ನಲೆ ಯುಳ್ಳ ಕೋಟಿ ಚೆನ್ನಯರ ಜನ್ಮಸ್ಥಳ . ಈ ಪಡುಮಲೆ ಕ್ಷೇತ್ರವನ್ನು ಪ್ರವಾಸೋದ್ಯಮ ತಾಣವನ್ನಾಗಿಸುವ ಯೋಜನೆಗೆ ₹ 5.25 ಕೋಟಿ ಅನುದಾನ ಮಂಜೂರುಗೊಂಡಿ ದ್ದರೂ. ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿದೆ. ಕೋಟಿ ಚೆನ್ನಯರ ತಾಯಿ ದೇಯಿ ಬೈದೆತ್ತಿ ಹೆಸರಿನಲ್ಲಿ ಸಂಜೀವಿನಿ ವನವೂ ಇಲ್ಲಿ ನಿರ್ಮಾಣವಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಧರ್ಮಶ್ರೀ ಪ್ರತಿ ಷ್ಠಾನದ ವತಿಯಿಂದ ನಿರ್ಮಾಣಗೊಂಡ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರ ಮತ್ತು ಥೀಮ್ ಪಾರ್ಕ್ ಈ ಕ್ಷೇತ್ರದ ಆಕರ್ಷಣೀಯ ತಾಣವಾಗಿ ಬೆಳೆದಿದ್ದು, ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಳ್ಳುವಂತೆ ಮಾಡಿದ್ದಲ್ಲದೆ ಪ್ರವಾಸಿಗ ರನ್ನು ಸೆಳೆಯುತ್ತಿದೆ.
ಈಡೇರಿದ ಬೇಡಿಕೆಗಳು: ಪುತ್ತೂರಿನಿಂದ ಈಶ್ವರಮಂಗಲ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರ ರಾಜ್ಯ ರಸ್ತೆ ಯಲ್ಲಿ ಕಾವು ಸಮೀಪದ ಮಾಡ್ನೂರು ಎಂಬಲ್ಲಿದ್ದ ಮುಳುಗು ಸೇತುವೆ ಸಮಸ್ಯೆ ನಿವಾರಣೆಯಾಗುವ ಮೂಲಕ ಕ್ಷೇತ್ರ ವ್ಯಾಪ್ತಿಯ ಜನತೆಯ ಬಹು ವರ್ಷದ ಬೇಡಿಕೆಯೊಂದು ಈಡೇರಿದೆ.
ಅಲ್ಲಿ ಹೊಸ ಸೇತುವೆ ನಿರ್ಮಾಣಗೊಂಡಿದ್ದು, ಪುತ್ತೂರು-ಈಶ್ವರಮಂಗಲ -ಪಳ್ಳತ್ತೂರು ರಸ್ತೆಯೂ ಅಭಿವೃದ್ಧಿ ಗೊಂಡಿದೆ. ಕೆಯ್ಯೂರು ಗ್ರಾಮದ ಮಾಡಾವು ದೇವಿ ನಗರದಲ್ಲಿ ನನೆಗುದಿಗೆ ಬಿದ್ದಿದ್ದ ಅಂಬೇ ಡ್ಕರ್ ಭವನದ ಕೆಲಸ ಪೂರ್ಣ ಗೊಂಡಿದೆ. ಕೌಡಿಚ್ಚಾರು ಪೆರಿಗೇರಿ ರಸ್ತೆ ಅಭಿವೃದ್ಧಿಯಾಗಿದೆ.
ನಿರ್ಲಕ್ಷ್ಯಕ್ಕೊಳಗಾದ ರಸ್ತೆಗಳು: ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆಯ ರಸ್ತೆಗಳು ಅಭಿವೃದ್ಧಿಗೊಂಡಿದ್ದರೂ ಈಶ್ವರಮಂಗ ಲದಿಂದ ಸುಳ್ಯಪದವು, ಬಡಗನ್ನೂರು ಗ್ರಾಮದ ಮುಡ್ಪಿನಡ್ಕದಿಂದ ಸುಳ್ಯ ಪದವಿಗೆ ಹೋಗುವ ಗಡಿ ಪ್ರದೇಶದ ಪ್ರಮುಖ ರಸ್ತೆಗಳು ಸಂಚಾರಕ್ಕೆ ಅಯೋ ಗ್ಯಕರ ರೀತಿಯಲ್ಲಿಯೇ ಉಳಿದು ಕೊಂಡಿದ್ದು, ಈ ರಸ್ತೆಗಳು ಜನಪ್ರತಿನಿಧಿ ಗಳ ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಕೆಯ್ಯೂರು ಗ್ರಾಮದ ಬೊಳಿಕಲದಲ್ಲಿ ಸ್ಥಾಪನೆಯಾಗ ಬೇಕಿದ್ದ 110 ಕೆವಿ ವಿದ್ಯುತ್ ಸ್ಥಾಪರ ನಿರ್ಮಾಣಕ್ಕೆ ಗ್ರಹಣ ಹಿಡಿದು ಬಾಕಿ ಯಾಗಿದೆ. ಕರ್ನಾಟಕ ಕೇರಳ ಗಡಿ ಭಾಗದ ಪಳ್ಳತ್ತೂರಿನಲ್ಲಿರುವ ಮುಳುಗು ಸೇತುವೆಗೆ ಮುಕ್ತಿ ನೀಡುವ ಪ್ರಯತ್ನ ಈ ಎರಡೂ ರಾಜ್ಯ ಸರ್ಕಾರಗಳಿಂದ ನಡೆದಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುವ ಸ್ಥಿತಿ ಬಂದಿದೆ.
ಎಂಡೊ ಆತಂಕ: ನೆಟ್ಟಣಿಗೆ ಮುಡ್ನೂರು ಗ್ರಾಮದ ಗಡಿಪ್ರದೇಶ ವ್ಯಾಪ್ತಿಯ ಕೇರ ಳದ ಮಿಂಚಿಪದವು ಎಂಬಲ್ಲಿನ ಗೇರು ತೋಪಿನ ಮಧ್ಯೆ ಇರುವ ಪಾಳುಬಾವಿ ಯೊಂದರಲ್ಲಿ ಹಲವು ವರ್ಷಗಳ ಹಿಂದೆ ನಿರುಪಯುಕ್ತ ಎಂಡೋಸಲ್ಫಾನ್ ಬಾಟಲಿ ಮತ್ತು ಬ್ಯಾರಲ್‌ಗಳನ್ನು ಹುದುಗಿದ್ದ ಪರಿಣಾಮವಾಗಿ ಆ ಭಾಗದ ಜನತೆಯ ಆರೋಗ್ಯದ ಮೇಲೆ ದುಷ್ಪ ರಿಣಾಮ ಬೀರುತ್ತಿದೆ ಎಂಬ ಗಂಭೀರ ಸಮಸ್ಯೆಯನ್ನು ಬಗೆಹರಿಸುವ ಕೆಲಸಗಳು ಎರಡೂ ಸರ್ಕಾರದಿಂದ ನಡೆಸಿಲ್ಲ. ಇದ ರಿಂದಾಗಿ ಈ ಭಾಗದ ಜನತೆ ಆತಂಕ ದಲ್ಲಿಯೇ ಕಾಲ ಕಳೆಯುವಂತಾಗಿದೆ.
ಈ ಬಾರಿ ಈ ಕ್ಷೇತ್ರ ಹಿಂದುಳಿದ ವರ್ಗದ ಬಿ ಮಹಿಳೆಗೆ ಮೀಸ ಲಾಗಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬಂಟ ಸಮುದಾಯದ ಮಹಿಳೆಯರ ಹೋರಾಟಕ್ಕೆ ವೇದಿಕೆ ಸಜ್ಜು ಗೊಳ್ಳುತ್ತಿದ್ದು, ತನ್ನ ಭದ್ರಕೋಟೆಯನ್ನು ಕಾಂಗ್ರೆಸ್ ಉಳಿಸಿಕೊಳ್ಳುವುದೇ ಅಥವಾ ಆಂತರಿಕ ಕಚ್ಚಾಟ ನಡೆಸಿ ಬಿಜೆಪಿಗೆ ಬಿಟ್ಟುಕೊಡುವುದೇ ಎಂಬುವುದನ್ನು ಮಾತ್ರ ಕಾದು ನೋಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.