ADVERTISEMENT

ಉದ್ಯಮಿಗೆ ಬೆದರಿಕೆ ಕರೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 10:25 IST
Last Updated 27 ಮಾರ್ಚ್ 2018, 10:25 IST

ಮಂಗಳೂರು: ಪಶು ಔಷಧಿಗಳ ಉತ್ಪಾ ದನಾ ಸಂಸ್ಥೆ ಹೊಂದಿರುವ ಉದ್ಯಮಿ ಡಾ.ಅರುಣ್‌ಕುಮಾರ್ ಅವರಿಗೆ ಭೂಗತ ಪಾತಕಿ ಕಲಿ ಯೋಗೀಶನ ಹೆಸರಿನಲ್ಲಿ ಹಲವು ಬಾರಿ ಇಂಟರ್ನೆಟ್‌ ಕರೆ ಮಾಡಿರುವ ವ್ಯಕ್ತಿಯೊಬ್ಬ ₹ 50 ಲಕ್ಷ ಹಫ್ತಾ ನೀಡುವಂತೆ ಬೆದರಿಕೆ ಹಾಕಿದ್ದಾನೆ.

ಭಾರತ್‌ ಆಗ್ರೋವೆಟ್‌ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ಪಾಲುದಾ ರರಾಗಿರುವ ಅರುಣ್‌ಕುಮಾರ್‌ ಅವರ ಮೊಬೈಲ್‌ ದೂರವಾಣಿಗೆ ಮಾರ್ಚ್‌ 17ರಿಂದ 23ರವರೆಗಿನ ಅವಧಿಯಲ್ಲಿ ಹಲವು ಬಾರಿ ಇಂಟರ್ನೆಟ್‌ ಕರೆ ಮಾಡಿರುವ ದುಷ್ಕರ್ಮಿ, ₹ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ತಾನು ಕಲಿ ಯೋಗೀಶ ಎಂದು ಪರಿಚಯಿಸಿಕೊಂಡು ಮಾತನಾಡಿರುವ ಆತ, ಅರುಣ್‌ಕುಮಾರ್‌ ಮೊಬೈಲ್‌ಗೆ ಅವಾಚ್ಯವಾಗಿ ನಿಂದಿಸಿ ಸಂದೇಶವನ್ನೂ ಕಳುಹಿಸಿದ್ದಾನೆ.

ಹಫ್ತಾ ನೀಡದಿದ್ದರೆ ತನ್ನ ಹುಡುಗರು ಮತ್ತು ಶೂಟರ್‌ಗಳನ್ನು ಕಚೇರಿಗೆ ಕಳುಹಿಸಿ ಗುಂಡಿನ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಅರುಣ್‌ಕುಮಾರ್‌ ಕಂಕನಾಡಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.