ADVERTISEMENT

ಉಳ್ಳಾಲ: ಕಡಲಬ್ಬರ ಆರಂಭ

ಮಳೆ ಅಡಿಯಿಡುವುದಕ್ಕೆ ಮೊದಲೇ ಭಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 4:07 IST
Last Updated 1 ಜೂನ್ 2017, 4:07 IST
ಉಳ್ಳಾಲ: ಕಡಲಬ್ಬರ ಆರಂಭ
ಉಳ್ಳಾಲ: ಕಡಲಬ್ಬರ ಆರಂಭ   

ಉಳ್ಳಾಲ: ಉಳ್ಳಾಲ ಸಮುದ್ರ ತೀರದ ಪ್ರದೇಶದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ದ್ದು, ಕಿಲೇರಿಯನಗರ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಮನೆ ಹಾಗೂ ಮಸೀದಿಗಳಿಗೆ ಅಲೆಗಳು  ಬುಧವಾರ ಮಧ್ಯಾಹ್ನದಿಂದ ಅಪ್ಪಳಿಸಲು ಆರಂಭ ವಾಗಿದ್ದು, ಜನ ಭೀತರಾಗಿದ್ದಾರೆ.

ಕಿಲೇರಿಯನಗರದಲ್ಲಿರುವ 10ಕ್ಕೂ ಅಧಿಕ ಮನೆಗಳು, ಮಸೀದಿಗಳಿಗೆ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ಮಳೆ ಆರಂಭವಾಗದೆ ಸಮುದ್ರದ ಅಲೆಗಳ ರಭಸ ಹೆಚ್ಚಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಅಲೆ ತಡೆಗೋಡೆಯಿಂದ ತೊಂದರೆ:  ಕೋಟೆಪುರ, ಮೊಗವೀರಪಟ್ನ ಭಾಗ ದಲ್ಲಿ ಶಾಶ್ವತ  ಅಲೆತಡೆಗೋಡೆ (ಬ್ರೇಕ್ ವಾಟರ್) ಕಾಮಗಾರಿ ನಡೆಯುತ್ತಿರುವ ಕಾರಣ ಸಮುದ್ರದ ಅಲೆಗಳು  ಕಿಲೇರಿ ಯನಗರ, ಸುಭಾಷನಗರ, ಉಚ್ಚಿಲ, ಸೋಮೇಶ್ವರ ಭಾಗದಲ್ಲಿ  ಅಪ್ಪಳಿಸಲು ಆರಂಭವಾಗಿದೆ.

ಏಕಕಾಲದಲ್ಲಿ   ಉಳ್ಳಾ ಲದಿಂದ ತಲಪಾಡಿ ಭಾಗದವರೆಗೂ ಸುರಕ್ಷಾ ಕ್ರಮ ಕೈಗೊಂಡು ಕಾಮಗಾರಿ ಆರಂಭಿಸುತ್ತಿದ್ದಲ್ಲಿ ಇಂತಹ  ತೊಂದರೆ ಮರುಕಳಿಸುತ್ತಿರಲಿಲ್ಲ ಅನ್ನುವುದು ಸ್ಥಳೀಯರ ಆರೋಪವಾಗಿದೆ.

ADVERTISEMENT

ಸಚಿವರು  ಮತ್ತೆ ಭೇಟಿ ನೀಡಲಿ:  ಕೆಲ ದಿನಗಳ ಹಿಂದೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದ ಕಾರಣ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿದ್ದರು.

ಈ ವೇಳೆ ಮೂರು ದಿನಗಳಲ್ಲಿ  ಅಧಿಕಾರಿಗಳು ಭೇಟಿ ನೀಡಿ ತಾತ್ಕಾ ಲಿಕ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದರು. ಆದರೆ ಈವರೆಗೆ ಸ್ಥಳೀಯ ನಗರಸಭೆ ಅಧಿಕೃತರಾಗಲಿ,  ಜಿಲ್ಲೆಯ ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ.  ಅದಕ್ಕಾಗಿ ಮತ್ತೆ ಸಚಿವರು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಜಿಲ್ಲಾಡಳಿತ  ಕೂಡಲೇ ಮಧ್ಯಪ್ರವೇಶಿಸುವಂತೆ ಒತ್ತಾ ಯಿಸಬೇಕು ಎಂದು ಆಗ್ರಹಿಸಿದ್ದಾರೆ.

****
ತಿಂಡಿ ಮಾಡುವ ಸ್ಥಿತಿಯಿಲ್ಲ
ಬ್ರೇಕ್ ವಾಟರ್ ಸರಿಯಾಗದೆ ಯಾವುದೂ ಸಾಧ್ಯವಿಲ್ಲದಂತಾಗಿದೆ.  ಉಪವಾಸದ ಸಂದರ್ಭ ಮನೆಯಲ್ಲಿ ತಿಂಡಿ ಮಾಡುವ ಸ್ಥಿತಿಯಲ್ಲಿ ಮನೆ ಮಂದಿಯಿಲ್ಲ. ಯಾವತ್ತು ಮನೆ ಮತ್ತು ಮಸೀದಿ ಸಮುದ್ರಪಾಲಾಗುವುದೋ ಅನ್ನುವ ಭೀತಿಯಲ್ಲಿದ್ದೇವೆ.

ಕಳೆದ ವರ್ಷವೂ ಪರಿಹಾರದ ಭರವಸೆ ಮಾಧ್ಯಮಗಳಲ್ಲಿ ಮಾತ್ರ ಕಂಡಿದ್ದೇವೆ. ಆದರೆ  ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ. ಸಚಿವರು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಕ್ರಮಕೈಗೊಳ್ಳಬೇಕಿದೆ ಎಂದು ಕಿಲೇರಿಯನಗರದ ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ  ಖಲೀಲ್ ಹೇಳಿದ್ದಾರೆ.

****
ಸ್ಥಳೀಯರನ್ನು ಎಬ್ಬಿಸಿದಲ್ಲಿ ಅವರು ಹೋಗಲು ಸ್ಥಳವಿಲ್ಲ. ಕೂಡಲೇ ಇಲ್ಲಿನ ಬಡಜನರಿಗೆ  ಶಾಶ್ವತ ಪರಿಹಾರ  ಒದಗಿಸಬೇಕು
ಜೈನುಲಾಬುದ್ದೀನ್, ಖತೀಬರು, ಬದ್ರಿಯ ಜುಮಾ ಮಸೀದಿ ಕಿಲೇರಿಯಾನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.