ADVERTISEMENT

ಕಟೀಲು ಪರಿಸರ ಸ್ವಚ್ಛತೆಗೆ ಆದ್ಯತೆ: ಈಶ್ವರ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 10:00 IST
Last Updated 22 ಜೂನ್ 2011, 10:00 IST
ಕಟೀಲು ಪರಿಸರ ಸ್ವಚ್ಛತೆಗೆ ಆದ್ಯತೆ: ಈಶ್ವರ್
ಕಟೀಲು ಪರಿಸರ ಸ್ವಚ್ಛತೆಗೆ ಆದ್ಯತೆ: ಈಶ್ವರ್   

ಕಟೀಲು (ಮೂಲ್ಕಿ): ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ವಠಾರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ದೇವಳದ ಆಡಳಿತ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಮುತುವರ್ಜಿ ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಕಟೀಲು ಸೂಚಿಸಿದರು.

ಕಟೀಲು ಪರಿಸರದಲ್ಲಿನ ಸ್ವಚ್ಛತೆ ಬಗ್ಗೆ ಮಂಗಳವಾರ ಪರಿಶೀಲನೆ ನಡೆಸಿದ ಅವರು ದೇವಸ್ಥಾನದ ಊಟದ ಎಲೆ ಎಸೆಯುವ ಪ್ರದೇಶ, ವಿಜಯಾ ಬ್ಯಾಂಕ್ ಬಳಿಯ ಭೋಜನಾ ಶಾಲೆ, ದೇವಳದ ಅನ್ನದಾನದ ಪರಿಸರ, ಕುದ್ರು ಪ್ರದೇಶ, ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡುವ ಸಭಾಂಗಣವನ್ನು ಆರೋಗ್ಯ ಇಲಾಖೆ ಮೂಲಕ ಸರ್ವೇ ನಡೆಸಿ ಮುಂಜಾಗೃತ ಕ್ರಮಕ್ಕೆ ಸೂಚನೆ ನೀಡಿದರು.

ಮಂಗಳೂರು ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಚಂದ್ರಪ್ರಭಾ, ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ನಂದಿನಿ ಯುವಕ ಮಂಡಲದ ದೇವಿಪ್ರಸಾದ್ ಶೆಟ್ಟಿ, ಆದರ್ಶ ಶೆಟ್ಟಿ ಎಕ್ಕಾರು, ವಿಶ್ವೇಶ್ವರರಾವ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.