ಮಂಗಳೂರು: ದೀರ್ಘಾವಧಿಯ ಶೈಕ್ಷಣಿಕ ಕೋರ್ಸುಗಳನ್ನು ತೆಗೆದು ಕೊಳ್ಳುವುದು ಆರ್ಥಿಕತೆಯ ದೃಷ್ಟಿ ಯಿಂದ ತುಸು ಕಷ್ಟವೇ. ಅಂತಹ ಸಂದರ್ಭಗಳಲ್ಲಿ ಬೇಗನೇ ಉದ್ಯೋಗ ಕ್ಷೇತ್ರ ಪ್ರವೇಶಿಸಲು ವಿದ್ಯಾರ್ಥಿಗಳು ಐಟಿಐ ಕೋರ್ಸುಗಳತ್ತ ಮುಖ ಮಾಡುತ್ತಾರೆ. ಇದಕ್ಕಾಗಿ ಅತ್ಯುತ್ತಮ ಅಂಕಗಳೂ ಬೇಕಾಗಿಲ್ಲ. ಎಸ್ಸೆಸ್ಸೆಲ್ಸಿ ಪಾಸ್ ಆದರೆ ಸಾಕು, ಐಟಿಐ ಕೋರ್ಸು ಗಳನ್ನು ಕೈಗೆತ್ತಿಕೊಳ್ಳ ಬಹುದು. ಅಷ್ಟೇ ಅಲ್ಲ, ಸ್ವ ಉದ್ಯೋಗದ ಕನಸು ಹೊತ್ತವರಿಗೆ ಐಟಿಐ ಮೊದಲ ಮೆಟ್ಟಿಲು.
ಉದಾಹರಣೆಗೆ ಮೆಕ್ಯಾನಿಕ್, ಫಿಟ್ಟರ್, ಮಿಷಿನಿಸ್ಟ್‌ನಂತಹ ಕೆಲಸಗಳ ಬಗ್ಗೆ ಒಂದಿಷ್ಟು ತರಬೇತಿ ಮುಂಚಿತವಾಗಿ ಪಡೆದುಕೊಂಡರೆ ನಂತರ ಅದೇ ಕ್ಷೇತ್ರದಲ್ಲಿ ದುಡಿಮೆ ಮಾಡಬಹುದು. ಅಷ್ಟರಲ್ಲಿ ಮುಂದಿನ ದಿನಗಳಲ್ಲಿ ಸ್ವಂತ ಉದ್ಯಮ ಆರಂಭಿಸುವುದಕ್ಕೆ ತಳಪಾಯ ಸಿಕ್ಕಂತಾಗುತ್ತದೆ.
ಈ ಬಾರಿ ಐಟಿಐ ಕೋರ್ಸುಗಳಿಗೆ ಕಾಲೇಜುಗಳು ಅರ್ಜಿ ಆಹ್ವಾನಿಸಿವೆ. ಉದ್ಯೋಗ ಮತ್ತು ತರಬೇತಿ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಐಟಿಐಗಳ 2014ನೇ ಶೈಕ್ಷಣಿಕ ಸಾಲಿನ ಕೋರ್ಸುಗಳಿಗೆ ಪ್ರವೇಶ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶವಿದೆ. ಶೈಕ್ಷಣಿಕ ವರ್ಷ ಆಗಸ್ಟ್‌ನಿಂದ ಆರಂಭವಾಗಲಿದೆ. ಐಟಿಐಗೆ ಪ್ರವೇಶ ಬಯಸುವ ಆಸಕ್ತರು ಜೂನ್ 6ರೊಳಗೆ ಇಲಾಖೆಯ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. www.emptrg.kar.nic.in ಮತ್ತು www.detkarnataka.org.in ಮೂಲಕ ಯಾವುದೇ ಕೋರ್ಸಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಸಂಸ್ಥೆಯನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು : 0824–2211285.
ಮಂಗಳೂರಿನ ಸರ್ಕಾರಿ ಕೈಗಾರಿಕಾ ತರ ಬೇತಿ(ಪುರುಷ) ಸಂಸ್ಥೆಯಲ್ಲಿ ಲಭ್ಯವಿ ರುವ ಕೋರ್ಸುಗಳ ವಿವರ ಇಲ್ಲಿದೆ. ಎಲ್ಲ ಕೋರ್ಸುಗಳಿಗೂ ಎಸ್‌ಎಸ್‌ಎಲ್ ಸಿ ಪಾಸ್ ಆಗಿರುವುದು ಕಡ್ಡಾಯ.
ಆರು ತಿಂಗಳ ಅವಧಿಯ ಡ್ರೈವರ್ ಕಮ್ ಮೆಕ್ಯಾನಿಕ್ ಎಲ್‌ಎಂವಿ ಮತ್ತು ಮೆಕ್ಯಾನಿಕ್ ಆಟೊ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಕೋರ್ಸುಗಳಿಗೆ, ಒಂದು ವರ್ಷ ಅವಧಿಯ ಆರ್ಕಿಟೆಕ್ಚರಲ್ ಅಸಿಸ್ಟೆಂಟ್, ಸಿಒಪಿಎ (ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾ ಮಿಂಗ್), ಪ್ಲಾಸ್ಟಿಕ್ ಪ್ರಾಸೆಸಿಂಗ್ ಅಪರೇಟರ್ ಕೋರ್ಸುಗಳಿಗೆ ಅರ್ಜಿ ಸಲ್ಲಿಸಬಹುದು.
ಅದೇ ರೀತಿ ಎರಡು ವರ್ಷ ಅವಧಿಯ ಕೋರ್ಸುಗಳಾದ ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಷಿನಿಸ್ಟ್, ಮೆಕ್ಯಾನಿಕ್ ರೆಫ್ರಿಜರೇಶನ್ ಆಂಡ್ ಏರ್ ಕಂಡಿಷನಿಂಗ್, ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್ ವೇರ್, ಟರ್ನರ್, ಸಿಒಇ (ಆಟೊ ಮೊಬೈಲ್) ಕೋರ್ಸುಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. ವೆಲ್ಡರ್ (ಗ್ಯಾಸ್ ಆಂಡ್ ಎಲೆಕ್ಟ್ರಿಕ್) ಕಲಿಕೆಯೂ ಒಂದು ವರ್ಷ ಅವಧಿಯ ಕೋರ್ಸಾಗಿದ್ದು ಅರ್ಜಿ ಸಲ್ಲಿಸಲು ಅವಕಾಶವಿದೆ. ಕನಿಷ್ಠ ವಿದ್ಯಾರ್ಹತೆ ಎಂಟನೇ ತರಗತಿ ಪಾಸಾಗಿದ್ದರೆ ಸಾಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.