ADVERTISEMENT

ಕೊಣಾಜೆ: ಮಳೆಗೆ ಕುಸಿದ ಕಾಲುಸಂಕ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 9:40 IST
Last Updated 3 ಜುಲೈ 2012, 9:40 IST

ಮುಡಿಪು: ಕಳೆದ ಕೆಲದಿನಗಳಿಂದ ಸುರಿದ ಬಾರೀ ಮಳೆಗೆ ಕೊಣಾಜೆ ಗ್ರಾಮದ ಪುಲಿಂಚಾಡಿಯಲ್ಲಿ ಕಾಲುಸಂಕವೊಂದು ಕುಸಿದು ಬಿದ್ದ ಘಟನೆ ಸೋಮವಾ ಬೆಳಿಗ್ಗೆ ಸಂಭವಿಸಿದೆ.

ಕೊಣಾಜೆಯ ಪುಲಿಂಚಾಡಿಯಲ್ಲಿ ಈ ಕಾಲುಸಂಕದ ಮೂಲಕವೇ ಈ ಭಾಗದ ಜನರು ನಡೆದುಕೊಂಡು ಹೋಗುತ್ತಿದ್ದರು. ಪಂಚಾಯಿತಿ ವತಿಯಿಂದ ಹಲವು ವರ್ಷ ಹಿಂದೆ ನೀರು ಹರಿಯುವ ತೋಡಿಗೆ ಕಾಲು ಸಂಕವನ್ನು ನಿರ್ಮಿಸಿಕೊಡಲಾಗಿತ್ತು.
 
ಆದರೆ ಕಾಲುಸಂಕ ನಿರ್ಮಾಣದ ವೇಳೆ ಒಂದು ಭಾಗಕ್ಕೆ ಮಾತ್ರ ಕಲ್ಲಿನ ಮೂಲಕ ಪಿಲ್ಲರ್ ಹಾಕಲಾಗಿತ್ತು. ಇದರಿಂದ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಗೆ ಕಾಲುಸಂಕದ ಒಂದು ಬದಿಯ ಮಣ್ಣು ಕುಸಿದ ಪರಿಣಾಮ ಸಂಕ ತೋಡಿಗೆ ಕುಸಿದು ಬಿದ್ದಿದೆ.
 
ಈ ಪ್ರದೇಶದ ಶಾಲಾ ಮಕ್ಕಳು ಇದೇ ಕಾಲುಸಂಕದ ಮೂಲಕ ಶಾಲೆಗೆ ತೆರಳುತ್ತಾರೆ. ಸೋಮವಾರ  ನಾಲ್ಕೈದು ವಿದ್ಯಾರ್ಥಿಗಳು ಬೆಳಿಗ್ಗೆ ದಾಟಿದ ಕ್ಷಣವೇ ಸಂಕ  ಕುಸಿದಿದೆ. ನಂತರ ಸ್ಥಳೀಯ ಗ್ರಾಮಸ್ಥರು ಒಟ್ಟು ಸೇರಿ ಕುಸಿದು ಬಿದ್ದ ಕಾಲುಸಂಕವನ್ನು ತೆರವುಗೊಳಿಸಿ ತೋಡು ದಾಟಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.