ADVERTISEMENT

ಕೋಟೇಶ್ವರ ಗಾಣಿಗರ ಯುವಕ ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 9:45 IST
Last Updated 11 ಜೂನ್ 2011, 9:45 IST

ಕುಂದಾಪುರ: `ಗಾಣಿಗ ಸಮಾಜ ಶಿಕ್ಷಣದಲ್ಲಿ ಹಿಂದೆ ಉಳಿದಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣ, ಸಂಘಟನೆ ಅತ್ಯಗತ್ಯ~ ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ರಾಮಗಾಣಿಗ ಹೇಳಿದರು.

ಕೋಟೇಶ್ವರದ ಶಾರದಾ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಕೋಟೇಶ್ವರ ಗಾಣಿಗರ ಯುವಕ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಲ್ಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಅಸಂಘಟಿತ ಕಾರ್ಮಿಕರಿಗೆ ಗುರುತು ಚೀಟಿ ವಿತರಿಸಿದರು.

ಬೆಂಗಳೂರಿನ ಉದ್ಯಮಿ ದಿನಕರ ರಾವ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದರು. ಗ್ರಾ.ಪಂ ಸದಸ್ಯೆ ಪ್ರಭಾವತಿ ಗಾಣಿಗ ಅವರನ್ನು ಸನ್ಮಾನಿಸಲಾಯಿತು.

ರಾಜೇಂದ್ರ ಎಸ್.ನಾಯಕ್, ರಘುರಾಮ ಬೈಕಾಡಿ, ನಾಗರಾಜ ಗಾಣಿಗ, ವಿಜಯಕುಮಾರ್, ಕೋಟೇಶ್ವರ ಗಾಣಿಗರ ಯುವಕ ಸಂಘದ ಗೌರವಾಧ್ಯಕ್ಷ ಶಂಕರನಾರಾಯಣ ಗಾಣಿಗ, ಅಧ್ಯಕ್ಷ ಬಿ.ಜಿ.ನಾಗರಾಜ್, ಕೋಶಾಧಿಕಾರಿ ಗಿರೀಶ್ ಬಿ.ಎನ್, ಅನಂತಪದ್ಮನಾಭ, ಪ್ರಭಾಕರ ಕುಂಭಾಸಿ, ಕೆ.ಎಸ್.ಮಂಜುನಾಥ್, ಚಂದ್ರಶೇಖರ ಬೀಜಾಡಿ ಹಾಗೂ. ರಾಮಚಂದ್ರ ಗಾಣಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.