ADVERTISEMENT

ಗುರು-ಶಿಷ್ಯ ಬಾಂಧವ್ಯ ಪವಿತ್ರವಾಗಿರಲಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 8:15 IST
Last Updated 19 ಮಾರ್ಚ್ 2012, 8:15 IST

ಪುತ್ತೂರು: ಜ್ಞಾನದ ಪ್ರತೀಕವಾದ ಗುರುವಿಗೆ ಭಾರತೀಯ ಪರಂಪರೆಯಲ್ಲಿ ವಿಶೇಷ ಗೌರವವಿ ದ್ದು, ಗುರು ಶಿಷ್ಯರ ಬಾಂಧವ್ಯ ಪವಿತ್ರವಾಗಿರ ಬೇಕು ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ .ಎಂ.ಎಲ್. ಸಾಮಗ ಹೇಳಿದರು.

ಪುತ್ತೂರಿನ ಸರ್ಕಾರಿ ಪಿಯು ಕಾಲೇಜಿನ ಕನ್ನಡ ಸಂಘ, ತುಳು ಸಂಘ ಇತ್ತೀಚೆಗೆ ಹಮ್ಮಿಕೊಂಡಿದ್ದ `ಸಂಸ್ಕೃತಿ ಸುದಿನ~ ಕಾರ್ಯಕ್ರಮದಲ್ಲಿ ಅವರು ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯ ಬಾಂಧವ್ಯ ಕುರಿತು ಮಾತನಾಡಿದರು.
ಶಾಸಕಿ ಮಲ್ಲಿಕಾ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಹರಿನಾರಾಯಣ ಕೆದಿಲಾಯ  ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಕೆ.ರಾಮ ಭಟ್, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಸಂಕಪ್ಪ ರೈ, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ .ಎ.ವಿ.ನಾರಾಯಣ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಉಪನ್ಯಾಸಕ ಪ್ರೊ. ಚಿದಾನಂದ,ಉಪನ್ಯಾಸಕರಾದ ಡಾ.ಮಹಾಲಿಂಗ ಭಟ್, ಬಿ.ವಿ.ಸೂರ್ಯನಾರಾಯಣ, ಪ್ರೇಮಲತಾ ಜಯರಾಮ್, ಎನ್.ಕೆ.ರಾಮಚಂದ್ರ, ಉಮಾಮಹೇಶ್ವರ, ರಮೇಶ್ ಕೆ.ಟಿ, ನಳಿನಿ ಮತ್ತಿತರರು ಇದ್ದರು.

ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ .ಎಂ.ಎಲ್. ಸಾಮಗ, ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟ್ರಮಣ ಭಟ್, ಪೆರುವೋಡಿ ನಾರಾಯಣ ಭಟ್, ಪದ್ಯಾಣ ಗಣಪತಿ ಭಟ್,  ಸಾಹಿತಿ ಮುಳಿಯ ಶಂಕರ ಭಟ್, ವಿದ್ವಾನ್ ಅಳಿಕೆ ಸಂಜೀವ ಶೆಟ್ಟಿ, ಗಾಯಕ ಚಂದ್ರಶೇಖರ ಕೆದಿಲಾಯ,  ಅವರ ಕಲಾ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಎಲ್.ಎನ್.ಭಟ್, ವೆಂಕಟೇಶ್ ಕಿಣಿ, ಈಶ್ವರ ಭಟ್, ಎಂ.ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.