ADVERTISEMENT

ಗೇರು ಧಾರಣೆ ಇಳಿಯದು: ಡಾ.ವೆಂಕಟೇಶ್

ಪುತ್ತೂರು: ಡಿಸಿಆರ್ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 7:05 IST
Last Updated 19 ಜೂನ್ 2018, 7:05 IST
ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಸೋಮವಾರ ನಡೆದ ಡಿಸಿಆರ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.
ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಸೋಮವಾರ ನಡೆದ ಡಿಸಿಆರ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.   

ಪುತ್ತೂರು: ಸಂಬಾರ ಪದಾರ್ಥವಾಗಿರುವ ಗೋಡಂಬಿಗೆ ದೇಶ, ವಿದೇಶ ಗಳಲ್ಲಿಯೂ ಬೇಡಿಕೆ ಇರುವುದರಿಂದ ಮಾರುಕಟ್ಟೆ ತೀರಾ ಇಳಿಕೆಯಾಗದು.  ಎಂದು ಕೇರಳದ ಕೊಚ್ಚಿ ಗೇರು ಮತ್ತು ಕೊಕ್ಕೊ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ವೆಂಕಟೇಶ್ ಎನ್. ಹುಬ್ಬಳ್ಳಿ  ಹೇಳಿದರು.

ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಸೋಮವಾರ ನಡೆದ ಡಿಸಿಆರ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರ ಮದಲ್ಲಿ ಅವರು ಮಾತನಾಡಿದರು.

‘ ದೇಶದಲ್ಲಿ ಗೇರು ಉತ್ಪಾದನೆ ಆಗದ ಹಿನ್ನಲೆಯಲ್ಲಿ ಹದಿಮೂರು ರಾಜ್ಯಗಳಲ್ಲಿ 63 ಸಾವಿರ ಹೆಕ್ಟೇರ್ ಗೇರು ಕೃಷಿ ವಿಸ್ತರಿಸಲು ಕೇಂದ್ರ ಕೃಷಿ ಮಂತ್ರಾಲಯ ಆದೇಶ ಹೊರಡಿಸಿದ್ದು, ನಿರ್ದೇಶನಾಲಯದಿಂದ ಗೇರು ಕೃಷಿಗಾಗಿ ಈಗಾಗಲೇ ‘27 ಕೋಟಿ ವಿನಿಯೋಗ ಮಾಡಲಾಗಿದ’ ಎಂದರು.

ADVERTISEMENT

‘ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ 33 ವರ್ಷ ಆಯಿತು. ಒಂದು ಗ್ರಾಮವನ್ನೂ ದತ್ತು ತೆಗೆದುಕೊಂಡು, ಗೇರು ಕೃಷಿ ಅಭಿವೃದ್ಧಿಗೆ ಗೇರು ಸಂಶೋಧನಾ ನಿರ್ದೇಶನಾಲಯ ಒತ್ತು ನೀಡಿಲ್ಲ. ವರ್ಷಕ್ಕೆ ಒಂದು ಗ್ರಾಮವನ್ನಾದರೂ ದತ್ತು ತೆಗೆದುಕೊಂಡು, ಅಲ್ಲಿ ಗೇರು ಕೃಷಿಯನ್ನು ಬೆಳೆಸಲು ಉತ್ತೇಜನ ನೀಡಬೇಕು’ ಎಂದು ಸಲಹೆ ನೀಡಿದರು.

`ಘನಸಾಂಧ್ರತೆಯಲ್ಲಿ ಗೇರುಕೃಷಿ ನಿರ್ವಹಣೆ' ಎಂಬ ಕರಪತ್ರ ಬಿಡುಗಡೆ ಮಾಡಿದ ಕಾರ್ಯಕ್ರಮ ಉದ್ಘಾಟಕರಾದ ಶಾಸಕ ಸಂಜೀವ ಮಠಂದೂರು ಮಾತನಾಡಿ ‘ಆಧುನಿಕತೆ, ವಿಜ್ಞಾನ ಬೆಳವಣಿಗೆ ಆಗಿದ್ದರೂ, ಕೃಷಿ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಕೃಷಿಯನ್ನು ಕೈಗಾರಿಕೆಯಾಗಿ ನೋಡಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ನಿರ್ದೇಶನಾಲಯದ ನಿರ್ದೇಶಕ ಡಾ. ಎಂ.ಜಿ. ನಾಯಕ್ ‘ದೇಶದಲ್ಲಿ ₹16ರಿಂದ ₹17 ಲಕ್ಷ ಟನ್‌ ಗೇರುಬೀಜನ ಅಗತ್ಯ ಇದೆ. ಆದರೆ ಉತ್ಪಾದನೆ 6-7 ಲಕ್ಷ ಟನ್ ದಾಟಿಲ್ಲ. ಮುಂದಿನ 4-5 ವರ್ಷದಲ್ಲಿ ಇದರ ಬೇಡಿಕೆ 25 ಲಕ್ಷ ಟನ್‌ಗೂ ಏರಿಕೆ ಆಗಬಹುದು. ಈ ಹಿನ್ನೆಲೆಯಲ್ಲಿ ತಾಂತ್ರಿಕತೆಯನ್ನು ಬಳಸಿಕೊಳ್ಳುವ ತೀರಾ ಅಗತ್ಯವಿದೆ ಎಂದರು.

ಕೆಸಿಡಿಸಿ ಎಂಡಿ ಪ್ರಕಾಶ್ ನಟಾಲ್ಕರ್, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಪ್ರಕಾಶ್ ಎ. ಮೊಂತೇರೊ ಮಾತನಾಡಿದರು.

ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ರೈ ಕೆ. ಅವರು ಸಂಸ್ಥಾಪನಾ ದಿನದ ಬಗ್ಗೆ ಉಪನ್ಯಾಸ ನೀಡಿದರು. ನಿರ್ದೇಶನಾಲಯದ ವಿಜ್ಞಾನಿಗಳಾದ ಈರದಾಸಪ್ಪ ಇ. ವಂದಿಸಿದರು. ಡಾ. ಮೋಹನ್ ನಿರೂಪಿಸಿದರು.

‘ಅಡಿಕೆ ಬದಲು ಗೇರು ಬೆಳೆಯಿರಿ’

‘ಉತ್ತರ ಭಾರತದ ಒಂದಷ್ಟು ಮಾರುಕಟ್ಟೆಯನ್ನು ನಂಬಿಕೊಂಡು ನಾವಿಲ್ಲಿ ಅಡಿಕೆ ಕೃಷಿ ಮಾಡುತ್ತಿದ್ದೇವೆ. ನಾವು ಬೆಳೆಯುವ ಅಡಿಕೆ ನಮ್ಮಲ್ಲೇ ದೊಡ್ಡ ಬಳಕೆ ಇಲ್ಲ. ಅಡಿಕೆ ವಾಣಿಜ್ಯ ಬೆಳೆಯಾದ ಕಾರಣ ಅದರ ಬದಲು, ಗೇರು ಕೃಷಿಯನ್ನು ಬೆಳೆಸಿದರೆ ಉತ್ತಮ. ದೀರ್ಘಕಾಲದ ಬೆಳೆ, ಭವಿಷ್ಯ ಹೊಂದಿರುವ ಬೆಳೆಯನ್ನು ನೋಡಿಕೊಂಡು ಕೃಷಿ ಮಾಡಬೇಕು. ಮಾಹಿತಿ ನೀಡುವ ಕೆಲಸ ಇಲಾಖೆಯಿಂದ ಆಗಬೇಕು. ಆಗ ಕೃಷಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಶಾಸಕ ಸಂಜೀವ ಮಠಂದೂರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.