ADVERTISEMENT

ಗ್ರಾಮೀಣ ಭಾಗ ಹಿಂದುಳಿಯಲು ರಾಜಕಾರಣಿಗಳೇ ಕಾರಣ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 8:40 IST
Last Updated 16 ಏಪ್ರಿಲ್ 2011, 8:40 IST
ಗ್ರಾಮೀಣ ಭಾಗ ಹಿಂದುಳಿಯಲು ರಾಜಕಾರಣಿಗಳೇ ಕಾರಣ
ಗ್ರಾಮೀಣ ಭಾಗ ಹಿಂದುಳಿಯಲು ರಾಜಕಾರಣಿಗಳೇ ಕಾರಣ   

ಸುಬ್ರಹ್ಮಣ್ಯ: ‘ಗ್ರಾಮೀಣ ಭಾಗಗಳು ಹಿಂದುಳಿಯಲು ರಾಜಕಾರಣಿಗಳು ಕಾರಣ. ರಾಜಕೀಯ ವ್ಯಕ್ತಿಗಳು ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಮನಸ್ಸು ಮಾಡಿದರೆ ನಗರ ಪ್ರದೇಶಗಳಂತೆ ಹಳ್ಳಿ ಪ್ರದೇಶಗಳೂ ಪ್ರಗತಿಹೊಂದುತ್ತವೆ. ರಾಜಕಾರಣಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು’ ಎಂದು ಐಕಳದ ಪೊಂಪೈ ಕಾಲೇಜಿನ ಸಹಪ್ರಾದ್ಯಾಪಕ ಪ್ರೋ.ಕೆ.ಎ.ಪುರುಷೋತ್ತಮ ಗೌಡ ಹೇಳಿದರು.

ಕರಂಗಲ್ಲು ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಮತ್ತು ನೂತನ ರಂಗ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ‘ಸ್ವಾವಲಂಬನೆ ಮತ್ತು ಗ್ರಾಮೀಣ ಆರ್ಥಿಕತೆ’ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದರು.

ನಿವೃತ್ತ ಶಿಕ್ಷಕ ಭಾಸ್ಕರ ಗೌಡ ಉಳುವಾರು, ನೂತನ ರಂಗಮಂದಿರ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ  ಸದಸ್ಯ ಕೆ.ಎಸ್.ದೇವರಾಜ್ ಬಹುಮಾನ ವಿತರಿಸಿದರು.

ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ, ಗ್ರಾ.ಪಂ. ಸದಸ್ಯರಾದ ದಿವಾಕರ ಮುಂಡೋಡಿ, ರತ್ನಾವತಿ, ಜಾನಕಿದೇವ, ಸಮೂಹ ಸಂಪನ್ಮೂಲ ಅಧಿಕಾರಿ ಗಂಗಮ್ಮ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಬೊಳಿಯಪ್ಪ ಗೌಡ, ಧ್ರುವಕುಮಾರ್ ಕಂಬಳ ಅತಿಥಿಗಳಾಗಿದ್ದರು.

ಶಾಲೆಯಲ್ಲಿ ಸೇವೆ ಸಲ್ಲಿಸಿದ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಅಂಗನವಾಡಿ ಪುಟಾಣಿಗಳಿಂದ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.