ADVERTISEMENT

ಜಾಗವೂ ಇಲ್ಲ, ಗೊಬ್ಬರವೂ ಖಾಲಿಯಾಗುತ್ತಿಲ್ಲ!

ಪಳಿಕೆ ತ್ಯಾಜ್ಯ ವಿಲೇವಾರಿ ಘಟಕ–ಗೊಬ್ಬರ ತಯಾರಿಕೆ ಯಶಸ್ವಿ

ಮಹಮ್ಮದ್ ಅಲಿ ವಿಟ್ಲ
Published 16 ಮೇ 2016, 6:01 IST
Last Updated 16 ಮೇ 2016, 6:01 IST
ಪಳಿಕೆ ಘಟಕದಲ್ಲಿ ಕೊಳೆಯುವ ತ್ಯಾಜ್ಯದಿಂದ ತಯಾರಾಗುತ್ತಿರುವ ಗೊಬ್ಬರ
ಪಳಿಕೆ ಘಟಕದಲ್ಲಿ ಕೊಳೆಯುವ ತ್ಯಾಜ್ಯದಿಂದ ತಯಾರಾಗುತ್ತಿರುವ ಗೊಬ್ಬರ   

ವಿಟ್ಲ: ಸ್ವಚ್ಛತಾ ಆಂದೋಲನದ ಅಡಿಯಲ್ಲಿ ಪೇಟೆಯ ಕಸವಿಲೇವಾರಿಗೆ ಮೂರು ವರ್ಷದ ಹಿಂದೆ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಳಿಕೆಯಲ್ಲಿ ನಿರ್ಮಾಣ ಗೊಂಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗೊಬ್ಬರ ತಯಾರಿಕೆ ಯಶಸ್ವಿ ಯಾಗಿ ನಡೆಯುತ್ತಿದೆ.

ಆದರೆ ನಾಗರಿ ಕರು ಕೊಳೆಯುವಂತಹ ಕಸದಿಂದ ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸದೇ ಸಂಗ್ರಾಹಕರಿಗೆ ನೀಡುತ್ತಿರುವುದರಿಂದ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಘಟಕದಲ್ಲಿ ಜಾಗದ ಸಮಸ್ಯೆ ಉಂಟಾಗಿದೆ.

ಪಂಚಾಯಿತಿ ವತಿಯಿಂದ ಕೆಲವು ವರ್ಷಗಳ ಹಿಂದೆ ಪಳಿಕೆ ಎಂಬಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಿದ್ದು, ಪೇಟೆಯ ಹೋಟೆಲ್, ಅಂಗಡಿ, ಮನೆಗ ಳಿಂದ ತ್ಯಾಜ್ಯ ಮಿಶ್ರಿತ ಕೊಳೆತ ವಸ್ತುಗಳ ನ್ನು ಆ ಪ್ರದೇಶದಲ್ಲಿ ಹಾಕಲಾಗುತ್ತಿದೆ. ಕೊಳೆತ ಮಾಂಸದ ತ್ಯಾಜ್ಯಗಳನ್ನೂ, ಆಸ್ಪತ್ರೆ ತ್ಯಾಜ್ಯಗಳನ್ನೂ ಅಲ್ಲೇ ಎಸೆಯ ಲಾಗುತ್ತಿತ್ತು.

ಮಳೆ ನೀರು ಈ ತ್ಯಾಜ್ಯದ ಮೇಲೆ ನಿಂತು ಪರಿಸರದಲ್ಲಿ ಗಬ್ಬು ನಾರುವ ಜೊತೆಗೆ ಕಲುಷಿತ ನೀರು ಸುತ್ತ ಮುತ್ತಲಿನ ಪರಿಸರಕ್ಕೆ ಹರಿದು ಪರಿಸರ ಮಾಲಿನ್ಯ ಉಂಟಾಗುತ್ತಿತ್ತು.  ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಬಳಿಕ ಜಿಲ್ಲಾ ಪಂಚಾಯಿತಿಯ ಸ್ವಚ್ಛತಾ ಆಂದೋಲನದಡಿಯಲ್ಲಿ ಸುಮಾರು ₹ 20 ಲಕ್ಷ ವೆಚ್ಚದಲ್ಲಿ ಪ್ಲಾಸ್ಟಿಕ್ ಹೊರತು ಪಡಿಸಿ ಬೇರೆ ಎಲ್ಲ ರೀತಿಯ ತ್ಯಾಜ್ಯಗಳ ನ್ನೂ ಇಲ್ಲಿ ಗೊಬ್ಬರವಾಗಿ ಪರಿವರ್ತನೆ ಮಾಡುವ ಯೋಜನೆ ಜಾರಿಗೆ ಬಂತು.

2012 ಜುಲೈ 15ಕ್ಕೆ ಘಟಕದ ಉದ್ಘಾ ಟನೆ ನಡೆದು ಪೇಟೆಯ ಕಸವನ್ನು ವಾಹ ನದ ಮೂಲಕ ಸಂಗ್ರಹಿಸಿ ಕೊಂಡೊಯ್ದು ಘಟಕದಲ್ಲಿ ಗೊಬ್ಬರ ತಯಾರಿಕೆ ಆರಂಭವಾಯಿತು.

ಈ ವಿಲೇವಾರಿ ವ್ಯವಸ್ಥೆಗೆ ಸಾರ್ವಜ ನಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಯಾದರೂ ನಾಗರೀಕರು ಕೊಳೆಯುವ ಕಸವನ್ನು ಮತ್ತು ಪ್ಲಾಸ್ಟಿಕ್ ಅನ್ನು ಬೇರ್ಪ ಡಿಸದೆ ನೀಡುತ್ತಿರುವುದು ಕಾರ್ಮಿಕರ ಸಮಯ ಹಾಳು ಮಾಡುತ್ತಿದೆ.

ಕೊಳೆಯುವ ಕಸವನ್ನು ಬೇರ್ಪಡಿಸಿ ದಾಗ ಸಿಗುತ್ತಿರುವ ಪ್ಲಾಸ್ಟಿಕ್ ಘಟಕದಲ್ಲಿ ರಾಶಿ ಬಿದ್ದಿದ್ದು, ಅದರ ವಿಲೇವಾರಿಯೇ ಸದ್ಯ ಪಂಚಾಯಿತಿ ಅಧಿಕಾರಿಗಳಿಗೆ ಯಕ್ಷಪ್ರಶ್ನೆಯಾಗಿದೆ.

ಪ್ಲಾಸ್ಟಿಕ್‌ನಿಂದ ಪರಿಸರ ಸ್ನೇಹಿ ಪೆಟ್ರೋಲ್ ಹಾಗೂ ಅನಿಲೀಕರಣ ತಂತ್ರಜ್ಞಾನದಿಂದ ವಿದ್ಯುತ್ ತಯಾರಿಸ ಬಹುದಾಗಿದೆ. ಇದರಿಂದ ವಿಟ್ಲದ ಕಸ ವಿಟ್ಲದ ಜನರಿಗೇ ಉಪಯೋಗಕ್ಕೆ ಸಿಗಲಿದ್ದು, ಪಂಚಾಯಿತಿ ಯಾಕೆ ಮಾಡ ಬಾರದು ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ತ್ಯಾಜ್ಯ ಸಂಗ್ರಾಹಕರಿದ್ದರೂ ಕಸ ಎಸೆಯುವ ಅನಕ್ಷರಸ್ಥರು: ಮನೆ ಮನೆಗೆ ವಾಹನದ ಮೂಲಕ ಬಂದು ಕಸ ಸಂಗ್ರಹಣೆ ಮಾಡಲು ಪಂಚಾಯಿತಿ ವಾಹನ ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿದೆ. ಪಂಚಾಯಿತಿ ಅಂಗಡಿ, ಮನೆ, ಹೋಟೆಲ್‌ಗಳ ಕಸ ಸಂಗ್ರಹಣೆಗೆ ₹ 50ರಿಂದ 250ರವರೆಗೆ ವಿವಿಧ ಸ್ಥರದಲ್ಲಿ ದರ ವಿಧಿಸಿದೆ.

ಸಂಗ್ರಾಹಕರಲ್ಲಿ ತ್ಯಾಜ್ಯ ನೀಡಬೇಕಾದರೆ ಹಣ ಪಾವತಿ ಮಾಡ ಬೇಕಾಗುತ್ತದೆಂದು ಕೆಲವೊಂದು ಮಂದಿ ತ್ಯಾಜ್ಯವನ್ನು ತೊಟ್ಟೆಗಳಲ್ಲಿ ಕಟ್ಟಿಕೊಂಡು ದ್ವಿಚಕ್ರವಾಹನದಲ್ಲಿ ತಂದು ಘಟಕದ ಮುಂದೆ ಹಾಗೂ ಮುಖ್ಯ ರಸ್ತೆಯ ಬದಿ ಗಳಲ್ಲಿ ಎಸೆದುಹೋಗಿ ಅನಕ್ಷರಂತೆ ವರ್ತಿ ಸುತ್ತಿದ್ದಾರೆ. ಇದು ಸ್ವಚ್ಛತೆಗಾಗಿ ಪಂಚಾ ಯಿತಿ ವಹಿಸಿದ ಕಾಳಜಿಯನ್ನು ಹಾಳು ಮಾಡುತ್ತಿದೆ.

ಪ್ಲಾಸ್ಟಿಕ್ ಸುಟ್ಟರೆ ಮಾರಕ ಡೈಯಾ ಕ್ಸಿನ್ ರಾಸಾಯನಿಕ ಬಿಡುಗಡೆಯಾಗು ವುದು ಗೊತ್ತಿದ್ದರೂ ಇಲ್ಲಿ ನಿರಂತರ ಪ್ಲಾಸ್ಟಿಕ್‌ ಸುಡುವ ಕಾರ್ಯವೂ ನಡೆದಿದೆ. ವಿಟ್ಲ ಪಟ್ಟಣ ಪಂಚಾಯಿತಿ ಜಾರಿಗೆ ತಂದ ಕಸ ವಿಲೇವಾರಿ ಘಟಕವನ್ನು ಜನ ಸಮರ್ಪಕವಾಗಿ ಬಳಸಿಕೊಳ್ಳಬೇಕು, ಇದೀಗ ಘಟಕಕ್ಕೆ ಇರುವುದು ಕೇವಲ 25 ಸೆಂಟ್ಸ್‌ ಜಾಗ. ಘಟಕಕ್ಕೆ ಬದಲಿ ವಿಶಾಲ ಜಾಗಕ್ಕಾಗಿ ಇದೀಗ ಹುಡುಕಾಟ ನಡೆಯುತ್ತಿದೆ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.